ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು CNG ಕಾರುಗಳು ಮತ್ತು SUVಗಳ ಬೆಲೆಯನ್ನು ಬೆಲೆಯನ್ನು 1.80 ಲಕ್ಷ ರೂ.ವರೆಗೆ ಕಡಿತಗೊಳಿಸಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಬೆಲೆಯನ್ನು ಕಂಪನಿ ಕಡಿತಗೊಳಿಸಿದೆ. ಅಕ್ಟೋಬರ್ 31ರವರೆಗೆ ಮಾತ್ರ ಈ ಕೊಡುಗೆ ಇರುತ್ತದೆ.
ಯಾವ ಯಾವ ಕಾರಿನ ಬೆಲೆ ಎಷ್ಟು ಕಡಿತ..?
ಟಾಟಾ ಕಂಪನಿಯು ಕಾರುಗಳ ಮಾದರಿ ಮತ್ತು ಅವುಗಳ ಆವೃತ್ತಿಗೆ ಅನುಗುಣವಾಗಿ ಬೆಲೆ ಕಡಿತ ಮಾಡಿದೆ.
ಸಫಾರಿ: ಬೆಲೆ ಕಡಿತ 1.80 ಲಕ್ಷ
ಬೆಲೆ ಕಡಿತದ ನಂತರ ಸಫಾರಿ ಕಾರಿನ ಬೆಲೆ 15.49 ಲಕ್ಷದಿಂದ – 25.09 ಲಕ್ಷದವರೆಗೆ ಇದೆ.
ಹ್ಯಾರಿಯರ್: ಬೆಲೆ ಕಡಿತ 1.60 ಲಕ್ಷ
ಬೆಲೆ ಕಡಿತದ ನಂತರ ಹ್ಯಾರಿಯರ್ ಕಾರಿನ ಬೆಲೆ 14.99 ಲಕ್ಷದಿಂದ – 23.99 ಲಕ್ಷದವರೆಗೆ ಇದೆ.
ನೆಕ್ಸಾನ್: ಬೆಲೆ ಕಡಿತ 80 ಸಾವಿರ
ಬೆಲೆ ಕಡಿತದ ನಂತರ ನೆಕ್ಸಾನ್ ಕಾರಿನ ಬೆಲೆ 7.99 ಲಕ್ಷದಿಂದ – 15.29 ಲಕ್ಷದವರೆಗೆ ಇದೆ.
ಟಿಯಾಗೋ: ಬೆಲೆ ಕಡಿತ 65 ಸಾವಿರ
ಬೆಲೆ ಕಡಿತದ ನಂತರ ಟಿಯಾಗೋ ಕಾರಿನ ಬೆಲೆ 4.99 ಲಕ್ಷದಿಂದ – 8.74 ಲಕ್ಷದವರೆಗೆ ಇದೆ.
ಆಲ್ಟ್ರೋಜ್: ಬೆಲೆ ಕಡಿತ 45 ಸಾವಿರ
ಬೆಲೆ ಕಡಿತದ ನಂತರ ಆಲ್ಟ್ರೋಜ್ ಕಾರಿನ ಬೆಲೆ 6.49 ಲಕ್ಷದಿಂದ – 11.15 ಲಕ್ಷದವರೆಗೆ ಇದೆ.
ಟಿಗೋರ್: ಬೆಲೆ ಕಡಿತ 30 ಸಾವಿರ
ಬೆಲೆ ಕಡಿತದ ನಂತರ ಟಿಯಾಗೋ ಕಾರಿನ ಬೆಲೆ 5.99 ಲಕ್ಷದಿಂದ – 9.39 ಲಕ್ಷದವರೆಗೆ ಇದೆ.
ಪಂಚ್ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಬೆಲೆ ಕಡಿತ ಮಾಡಿರುವ ಟಾಟಾ ಮೋಟಾರ್ಸ್ ಈ ತಿಂಗಳು ಅಥವಾ ಮುಂದಿನ ತಿಂಗಳು ತನ್ನ ಕಾರುಗಳ ಮೇಲೆ ಬೇರೆ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ. ನೀವು ನಿಮ್ಮ ಹಳೆಯ ಕಾರನ್ನು ಹೊಸ ಕಾರಿಗೆ ವಿನಿಮಯ ಮಾಡಿಕೊಂಡರೆ ಕಂಪನಿಯು ಹೆಚ್ಚುವರಿಯಾಗಿ ರೂ 45,000 ದವರೆಗೆ ವಿನಿಮಯ ಪ್ರಯೋಜನವನ್ನು ನೀಡುತ್ತಿದೆ.ಬೆಲೆ ಕಡಿತದ ಪ್ರಯೋಜನವನ್ನು ಪಡೆದು ಈ ಹಬ್ಬದ ಋತುವಿನಲ್ಲಿ ಒಂದು ಕಾರನ್ನು ಕೊಳ್ಳಿರಿ.