ರಾಜ್ಯದಲ್ಲಿ ನೈಟ್ಲೈಫ್ ಮತ್ತಷ್ಟು ರಂಗೇರಲಿದೆ. ಇದರ ಮುನ್ಸೂಚನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ನಲ್ಲಿ ನೀಡಿದ್ದಾರೆ.
ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ಸಮಯವನ್ನು ಹೆಚ್ಚಿಸಲಾಗಿದೆ. ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ನಿಬರ್ಂಧವನ್ನು ಬೆಳಗಿನ ಜಾವ 1:00 ಗಂಟೆಯವರೆಗೆ ವಿಸ್ತರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬಿಬಿಎಂಪಿ ಸೇರಿ ರಾಜ್ಯದಲ್ಲಿ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ತುಮಕೂರು, ವಿಜಯಪುರ ಮಹಾನಗರಪಾಲಿಕೆಗಳಿವೆ. ಈ ಎಲ್ಲಾ ಮಹಾನಗರ ವ್ಯಾಪ್ತಿಗಳಲ್ಲಿ ಇನ್ನೂ ಮುಂದೆ ರಾತ್ರಿ 1:00 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ.