ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಆರ್ಆರ್ಬಿಯಲ್ಲಿ ದೊಡ್ಡ ಪ್ರಮಾಣದ ನೋಟಿಫಿಕೇಶನ್ಅನ್ನು ಬಿಡುಗಡೆ ಮಾಡಿದೆ. ಹೌದು ರೈಲ್ವೇ ನೇಮಕಾತಿ ಮಂಡಳಿ ಗ್ರೂಪ್ ಡಿ ನೇಮಕಾತಿ ಪ್ರಕ್ರಿಯೆ ಗೆ ಸಂಬಂಧಿಸಿದಂತೆ ಒಟ್ಟು 32,438 ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೂಡಲೇ ಅಧಿಕೃತ ವೆಬ್ಸೈಟ್ rrbcdg.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಫೆಬ್ರವರಿ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ನೇಮಕಾತಿ ಪೂರ್ಣ ಮಾಹಿತಿ,
ನೇಮಕಾತಿ ಸಂಸ್ಥೆ: ಆರ್ಆರ್ಬಿ
ಅರ್ಜಿ ಸಲ್ಲಿಕೆ: ಆನ್ನೈಲ್
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ ಆರಂಭ: ಜನವರಿ 23
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 22
ಒಟ್ಟು ಹುದ್ದೆಗಳು: 32,438 ಹುದ್ದೆಗಳು
ಹುದ್ದೆಗಳ ಪೂರ್ತಿ ಮಾಹಿತಿ,
ಪಟ್ಟಿ ಟ್ರ್ಯಾಕ್ ಮೇಂಟೇನರ್: 13,187 ಹುದ್ದೆಗಳು
ಪಾಯಿಂಟ್ಸ್ಮನ್: 5058 ಹುದ್ದೆಗಳು
ಸಹಾಯಕ (ವಿವಿಧ): ಒಟ್ಟು 3,077 ಹುದ್ದೆಗಳು
ಇಂಜಿನಿಯರಿಂಗ್ ಸಹಾಯಕ (ಟ್ರ್ಯಾಕ್ ಮೆಷಿನ್) 799
ಸಹಾಯಕ (ಸೇತುವೆ): 301
ಸಹಾಯಕ ಪಿ-ವೇ: 247
ಮೆಕ್ಯಾನಿಕಲ್ ಸಹಾಯಕ : 2587 ಸ
ಹಾಯಕ ಲೋಕೋ ಶೆಡ್ (ಡೀಸೆಲ್): 420
ಸಹಾಯಕ (ಕಾರ್ಯಾಗಾರ): 3077
ಶೈಕ್ಷಣಿಕ ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು. ಅಥವಾ ಎನ್ಸಿವಿಟಿ ಅಥವಾ ಐಟಿಐಯಿಂದ ಎನ್ಇಸಿ ಪ್ರಮಾಣಪತ್ರ ಪಡೆದಿರುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳ ವಯೋಮಿತಿ
ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬಯಸುವ ಅರ್ಜಿದಾರರಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 36 ವರ್ಷ ವಯಸ್ಸಾಗಿರಬೇಕು.
ಅರ್ಜಿಯ ಇತರ ಮಾಹಿತಿ
ರೈಲ್ವೆ ನೇಮಕಾತಿ ಮಂಡಳಿಯು ಈ ಮೇಲಿನ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮುಂದಿನ ವರ್ಷ 2025ರ ಜನವರಿ 23ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ವಿದ್ಯಾರ್ಹತೆಗಳು ಮತ್ತು ನೇಮಕಾತಿ ಪ್ರಕ್ರಿಯೆಗೆ ಸೂಕ್ತ ದಾಖಲಾತಿಗಳ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.