ಬೆಂಗಳೂರು: ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತದಿಂದಾಗಿ ಈವರೆಗೆ 333ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿದ್ದಾರೆ. ಸದ್ಯ ಐದನೇ ದಿನವೂ ಭರದಿಂದ ತೆರವು ಕಾರ್ಯಾಚರಣೆ ಮಾಡಲಾಗ್ತಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಶವಗಳಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಸುಮಾರು 6 ಸಾವಿರಕ್ಕೂ ಹೆಚ್ಚಿನ ಸ್ವಯಂ ಸೇವಕರು ಕಾರ್ಯಾಚರಣೆಗೆ ಸಾಥ್ ನೀಡಿದ್ದು, ಸ್ಥಳದಲ್ಲಿ ಸೇನೆ, ಎನ್ಡಿಆರ್ಎಫ್ , ಎಸ್ಡಿಆರ್ಎಫ್ , ಸ್ಥಳೀಯ ಪೊಲೀಸ್, ಅಗ್ನಿಶಾಮಕ ತಂಡ ಮೊಕ್ಕಾಂ ಹೂಡಿದೆ.
ಕಾಂಗ್ರೆಸ್ ನಿಂದ 100 ಮನೆ ನಿರ್ಮಾಣದ ಭರವಸೆ
ನಿನ್ನೆಯಿಂದ ವಯನಾಡಿನಲ್ಲಿ ಬೀಡು ಬಿಟ್ಟಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಮುಂಡಕ್ಕೈಗೆ ಭೇಟಿ ನೀಡಿ ರಕ್ಷಣಾಪಡೆಗಳ ಕಾರ್ಯವನ್ನ ಶ್ಲಾಘಿಸಿದ್ದರು. ಚೂರಲ್ಮಲಾಗೆ ರಾಹುಲ್ ವಾಪಸ್ ಆಗುತ್ತಿದ್ದಾಗ ಅವರ ವಾಹನವನ್ನ ಸ್ಥಳೀಯರು ಅಡ್ಡಗಟ್ಟಿದ್ದರು. ಸ್ಥಳೀಯ ಶಾಸಕರು ನಮ್ಮ ಕಷ್ಟ ಕೇಳ್ತಿಲ್ಲ, ನೆರವಿಗೂ ಬಂದಿಲ್ಲ ಅಂತ ಸಮಸ್ಯೆ ಬಗೆಹರಿಸಿ ಅಂತ ಕೂಗಾಡಿದ್ದರು.