ಚಿತ್ರದುರ್ಗ: ರಾಜ್ಯದ ಮುಡಾ ಹಗರಣದ ವಿಚಾರಕ್ಕೆ ಹೈಕೋರ್ಟ್ ನೀಡಿರುವ ತೀರ್ಪು ನಿರೀಕ್ಷಿತ ತೀರ್ಪು ಎಂದು ಗೋವಿಂದ ಕಾರಜೋಳ ಹೇಳಿದರು. ಅವರು ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ ಮಾತಾಡುತ್ತಾ, ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದು, ಅಂಗೈನ ಹುಣ್ಣಿನಂತೆ ಸ್ಪಷ್ಟವಾಗಿ ಕಾಣುತ್ತದೆ.
ಆದರೆ ಅವರು ಭಂಡತನದಿಂದ ಸಮರ್ಥನೆ ಮಾಡಿಕೊಳ್ಳೋದು ಹಾಗೂ ಬೇರೆಯವರ ಆಡಳಿತದಲ್ಲಿ ತಪ್ಪುಗಳಾಗುವೆ ಎಂದು ಬೊಟ್ಟು ಮಾಡಿ ತಮಗೆ ತಾವೇ ಕಳಂಕವನ್ನು ಹಚ್ಚಿಕೊಂಡಿದ್ದಾರೆ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕೌಟುಂಬಿಕ ಲಾಭಕ್ಕಾಗಿ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಅವರು ಬಲಿಯಾಗಿ ರಾಜೀನಾಮೆ ಕೊಡಲೇ ಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾಂಗ್ರೆಸ್ ನವರೇ ತಂದಿರುವ ಪಾರದರ್ಶಕ ಕಾಯ್ದೆ , ಬೇರೆಯವರಿಗಾಗಿ ಹೆಣೆದಿರುವ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಕಾನೂನಿನ ಕ್ರಮ ಎದುರಿಸುವಂತ ಸ್ಥಿತಿ ಬಂದಿದೆ.
ಇಂದಿನ ಹೈಕೋರ್ಟ್ ತೀರ್ಪು ಮಾಹಿತಿ ಹಕ್ಕು ಹೋರಾಟಗಾರರಿಗೆ ಸಿಕ್ಕ ಜಯ. ಇಂದು ಸಿದ್ದರಾಮಯ್ಯ ಗೌರವದಿಂದ ರಾಜೀನಾಮೆ ಕೊಡುವಂತೆ ಆಗ್ರಹಿಸಿದರು.ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ರಾಜ್ಯದಲ್ಲಿ ಅಪಾದನೆಗಳು ಬಂದಾಗ ಮುಖ್ಯ ಮಂತ್ರಿಗಳು ರಾಜೀನಾಮೆ ಕೊಟ್ಟ ಇತಿಹಾಸವೂ ನಮ್ಮ ಮುಂದಿದೆ. ರಾಮಕೃಷ್ಣ ಹೆಗಡೆಅವರು ಟೆಲಿಫೋನ್ ಕದ್ದಾಲಿಕೆ ಆರೋಪ ಬಂದಾಗ ನೇರವಾಗಿ ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆ ಗರಡಿಯಲ್ಲಿ ಬೆಳೆದವರು,ಆದರೆ ಅವರು ಸಿಎಂ ಆದ ಮೇಲೆ ಯಾರ ನೆನಪು ಇರಲಿಕ್ಕಿಲ್ಲ.ಆದರೆ ಸಿದ್ದರಾಮಯ್ಯ ಅವರು ಇವೆಲ್ಲವನ್ನು ಒಂದು ಬಾರಿ ನೆನಪು ಮಾಡಿಕೊಳ್ಳಬೇಕು.
ಸಿದ್ದರಾಮಯ್ಯ ಮುಡಾ ಹಗರಣ ಮುಗಿಯುತು. ಈಗ ವಾಲ್ಮೀಕಿ ಹಗರಣವಿದೆ. ಇದು ರೆಡ್ ಹ್ಯಾಂಡ್ ಹಗರಣ ಈಹ ಣವನ್ನು ಚುಮಾವಣೆಗೆ ಖರ್ಚು ಮಾಡಿದ್ದು, ಇದು ಐತಿಹಾಸಿಕ ಹಗರಣವಾಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೇ ಕೊಡಬೇಕು. ಬಂಡತನದಿಂದ ಸಮರ್ಥನೆ ಮಾಡುವುದು ಸರಿಯಲ್ಲ.ಸಚಿವರು ಸಿಎಂ ಹೇಳಿ ರಾಜೀನಾಮೆ ಕೊಡಿಸಬೇಕು. ಸುಪ್ರೀಂ ಕೋರ್ಟ್ ಗೆ ಹೋಗಬಹುದು, ಆದರೆ ಇದರ ಕರಾಳಛಾಯೆ ನಿಮ್ಮ ಮುಖದ ಮೇಲಿರುತ್ತದೆ. ಆದ್ದರಿಂದ ಕೂಡಲೇ ರಾಜೀನಾಮೆ ನೀಡಬೇಕು ಎಂದರು