ಬೆಂಗಳೂರು ;-ಉಚಿತ ಪ್ರಯಾಣ ಹಿನ್ನೆಲೆ ಸರ್ಕಾರಿ ಬಸ್ಗಳೆಲ್ಲಾ ತುಂಬಿ ತುಳುಕುತ್ತಿರುವ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ನಿಜ. ಇದು ಆರಂಭ ಅಲ್ವಾ? ಜನರು ಪುಣ್ಯ ಕ್ಷೇತ್ರಗಳಿಗೆ ಹೋಗುತ್ತಿರುವುದರಿಂದ ರಷ್ ಆಗುತ್ತಿದೆ. ಒಂದು ಸಲ ಹೋಗಿ ಬಂದ ಮೇಲೆ ಜನ ಮತ್ತೆ ಹೋಗುವುದಿಲ್ಲ. ಹೀಗಾಗಿ ಸ್ವಲ್ಪ ದಿನ ಕಳೆದ ಮೇಲೆ ಈ ರೀತಿ ಇರುವುದಿಲ್ಲ. ಒಂದು ತಿಂಗಳು ನೋಡುತ್ತೇವೆ. ಸತತವಾಗಿ ಜನ ಹೆಚ್ಚಾಗಿದ್ದಾರೆ ಅನ್ನಿಸುವ ಕಡೆ ಬಸ್ಗಳ ಹೆಚ್ಚಿಸುವ ಕೆಲಸ ಮಾಡುತ್ತೇವೆʼʼ ಎಂದು ಹೇಳಿದರು.
ಮಹಿಳೆಯರ ಸಂಖ್ಯೆಯೇ ಹೆಚ್ಚಿದ್ದರಿಂದ ಕೆಲವು ಕಡೆ ಅವಾಂತರಗಳು ಆಗಿರುವುದು ನಿಜ. ರಷ್ನಲ್ಲಿ ತಳ್ಳಾಡಿ, ಎಳೆದಾಡಿದ ಹಿನ್ನೆಲೆಯಲ್ಲಿ ಒಂದು ಕಡೆ ಡೋರೇ ಕಿತ್ತು ಬಂದಿದೆ. ಒಂದೆ ಸಲಕ್ಕೆ ಎಲ್ಲರೂ ಹೋಗಬೇಕು ಅಂದಾಗ ಹೀಗೆ ಆಗುತ್ತದೆ. ಎಲ್ಲರೂ ಒಂದೇ ಸಲ ಹೋಗೊದಕ್ಕಿಂದ ಜನ ತಾಳ್ಮೆಯಿಂದ ಪ್ಲಾನ್ ಮಾಡಿ ಓಡಾಡಬೇಕು ಎಂದು ಹೇಳಿದರು.
ʻʻಪುರುಷರಿಗೆ ಶೇಕಡಾ 50 ಸೀಟು ಮೀಸಲಿಟ್ಟರೂ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಒತ್ತಡ ಉಂಟಾಗಿದೆ. ಆರಂಭ ಆಗಿರುವ ಹಿನ್ನೆಲೆಯಲ್ಲಿ ಸ್ವಲ್ಪ ಗೊಂದಲವಿದೆ. ಎಲ್ಲವೂ ಕೂಡ ಬಗೆಹರಿಯುತ್ತದೆ. ಈ ಸಂಬಂಧ ನಮ್ಮ ಅಧಿಕಾರಿಗಳ ಜೊತೆ ಮಾತನಾಡುತ್ತೇನೆʼʼ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.