ಬೆಂಗಳೂರು: ಅನ್ನಭಾಗ್ಯ 2.0 ಯೋಜನೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗ್ತಿದೆ. ಇಂದು ಮೈಸೂರು, ಕೋಲಾರ ಫಲಾನುಭವಿಗಳ ಖಾಗೆತೆ ಹಣ ಜಮೆ ಮಾಡಲಾಯ್ತು.. 15 ದಿನದಲ್ಲಿ ಎಲ್ಲಾ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಹೋಗಲಿದೆ.
ಯೆಸ್.. ಅನ್ನಭಾಗ್ಯ ಯೋಜನೆಗೆ ಸರ್ಕಾರ ಅಧಿಕೃತ ಚಾಲನೆ ಕೊಟ್ಟಿದೆ. ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಹಾಗೂ ಡಿಸಿಎಂ ಇಬ್ಬರೂ ಡಿಬಿಟಿ, ನೇರ ನಗದು ವರ್ಗಾವಣೆ ಯೋಜನೆಗೆ ಚಾಲನೆ ನೀಡಿದ್ರು.. ಸಾಂಕೇತಿಕವಾಗಿ ಐದು ಬಿಪಿಎಲ್ ಕುಟುಂಬಸ್ಥರಿಗೆ ಹಣ ಬಿಡುಗಡೆ ಮಾಡಲಾಯ್ತು. ಮೊದಲ ದಿನ ಮೈಸೂರು ಹಾಗೂ ಕೋಲಾರದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಯ್ತು. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಇರುವ ಕುಟುಂಬದ ಯುಜಮಾನನ ಖಾತೆಗೆ ಹಣ ವರ್ಗಾವಣೆಯಾಗಲಿದೆ. ನಾಳೆ ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಹೋಗಲಿದೆ. ಹಂತ ಹಂತವಾಗಿ ಹದಿನೈದು ದಿನದೊಳಗೆ ಎಲ್ಲಾರ ಖಾತೆಗಳಿಗೆ ಹಣ ಹೋಗಲಿದೆ. ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರ ನೀಆಗಲಿದೆದ್ದು, ಐದು ಕೆಜಿ ಅಕ್ಕಿ ಬದಲು 34 ರೂಪಾಯಿಯಂತೆ ಹಣ ಬಿಡುಗಡೆ ಮಾಡಲಾಗ್ತಿದೆ. ಅನ್ನಭಾಗ್ಯ ಯೋಜನೆಗೆ ಲೋಗೋ ಕೂಡ ಬಿಡುಗಡೆ ಮಾಡಲಾಯ್ತು.
ಅನ್ನಭಾಗ್ಯ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ರು. ಎಫ್ ಸಿಐ ನವ್ರು ಅಕ್ಕಿ ಕೊಡ್ತೀವಿ ಅಂತಾ ಹೇಳಿ ಕೊಡಲಿಲ್ಲ. ಅದಕ್ಕೆ ಹಣ ಕೊಡ್ತಿದ್ದೀವಿ. ಪಾಪ ಬಿಜೆಪಿಯವರಿಗೆ ಹೊಟ್ಟೆ ಉರಿ ಶುರುವಾಗಿದೆ. ಆಗಸ್ಟ್ ೧೬ ರಂದು ಗೃಹ ಲಕ್ಷ್ಮಿಡಿಸೆಂಬರ್ ಒಳಗೆ ಯುವನಿಧಿ ಗ್ಯಾರಂಟಿ ಯೋಜನೆ ಜಾರಿ ಮಾಡ್ತೀವಿ ಎಂದ್ರು..
ಇನ್ನು ಹದಿನೈದು ದಿನದೊಳಗೆ 1.28 ಲಕ್ಷ ಕುಟುಂಬಗಳಿಗೆ ಹಣ ಜಮೆ ಆಗಲಿದೆ. ಮೊಟ್ಟ ಮೊದಲ ಬಾರಿಗೆ ದೇಶದಲ್ಲೇ ದಿಟ್ಟ ಹೆಜ್ಜೆ ಇಡ್ತಿದ್ದೇವೆ ಅಂತಾ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ರು.
ಅಲ್ದೇ ಕೇಂದ್ರ ಸರ್ಕಾರವನ್ನ ತರಾಟೆ ತೆಗೆದುಕೊಂಡ ಡಿಕೆಶಿ ನಾವು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಬಿಜೆಪಿಯವ್ರು ಚರ್ಚೆ, ರಾಜಕೀಯ ಮಾಡ್ತಿದ್ದಾರೆ. ಯಾರ್ಯಾರಿಗೆ ಉತ್ತರ ಕೊಡಬೇಕೋ ಅಸೆಂಬ್ಲಿಯಲ್ಲೇ ಕೊಟ್ತೀವಿ ಎಂದು ಬಿಜೆಪಿ ನಾಯಕರಿಗೆತಿರುಗೇಟು ನೀಡಿದ್ರು.
ಒಟ್ನಲ್ಲಿ ಶಕ್ತಿ, ಗೃಹಜ್ಯೋತಿ, ಗ್ಯಾರಂಟಿಗಳ ಬಳಿಕ ಮೂರನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆಯನ್ನ ಸರ್ಕಾರ ಜಾರಿ ಮಾಡಿದೆ. ಅಕ್ಕಿ ಲಭ್ಯ ಆಗುವವರೆಗೆ ಹಣವನ್ನೇ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಯೋಜನೆಯಿಂದ 1.28 ಕೋಟಿ ಬಿಪಿಎಲ್ ಕುಟುಂಬಗಳು 4.42 ಕೋಟಿ ಫಲಾನುಭವಿಗಳಿಗೆ ಅನುಕೂಲ ಆಗಲಿದೆ.