ಬೆಂಗಳೂರು: ರಾಜ್ಯ ರಾಜಾಧಾನಿಯಲ್ಲಿ ಬಿಸಿಲಾ ಬೇಗೆ ಜಾಸ್ತಿಯಾಗಿದೆ.. ಸೀಸನ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯ ತುಂಬೆಲ್ಲಾ ದ್ರಾಕ್ಷಿ ಹಣ್ಣುಗಳದ್ದೇ ಕಾರುಬಾರು ಜೋರಾಗಿಯೇ ಇರುತ್ತದೆ. ಹೀಗಾಗಿ ಹಸಿರು, ಕೆಂಪು, ಕಪ್ಪು, ಹಾಗೂ ಗುಲಾಬಿ ಹೀಗೆ ನಾನಾ ಬಣ್ಣ ಬಣ್ಣದ ದ್ರಾಕ್ಷಿಗಳು ದ್ರಾಕ್ಷಿ ಪ್ರಿಯರ ಗಮನ ಸೆಳೆಯುತ್ತದೆ.
ಯಾವ್ ಕಡೆ ನೋಡಿದ್ರೂ ದ್ರಾಕ್ಷಿಯೇ.. ಯಾವ್ದನ್ನ ತಿನ್ನೋದು.. ಯಾವ್ದನ್ನ ಬಿಡೋದು.. ಯಾವ್ದನ್ನ ಕೊಳ್ಳೋದು.. ಇಲ್ನೋಡಿ ವೆರೈಟಿ ವೆರೈಟಿ ಕಲ್ಲಗಂಡಿ..ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳಾ ಹಣ್ಣಿನ ಸೀಸನ್ ಮುಗಿಯುವರೆಗೂ ನಡೆಲಿಯಲಿದ್ದು, ಗ್ರಾಹಕರಿಗೆ 10% ರಿಯಾಯಿತಿ ದರರಲ್ಲಿ ಮಾರಾಟ ಮಾಡಲಾಗುತ್ತಿದೆ.
ದ್ರಾಕ್ಷಿ ಮೇಳದಲ್ಲಿ 13 ರಿಂದ 14 ಬಗೆಯ ತಳಿಗಳು ಇರಲಿದ್ದು, ಅವುಗಳನ್ನ ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಂತರ, ಕೋಲಾರ ಜಿಲ್ಲೆಗಳಿಂದ ತರಿಸಲಾಗಿದೆ. ದ್ರಾಕ್ಷಿ ಮೇಳದಲ್ಲಿ ಬೆಂಗಳೂರು ನೀಲಿ, ಶರದ್ ಸೀಡ್ ಲೆಸ್, ಕೃಷ್ಣ ಶರದ್, ಥಾಮ್ಸನ್ ಸೀಡ್ ಲೆಸ್, ಸೋನಾಕ, ಜಂಬೂ ಸರದ್, ಆಸ್ಟ್ರೇಲಿಯಾ ರೆಡ್ ಗ್ಲೂಬ್ ತಳಿಗಳನ್ನ ಪ್ರದರ್ಶನದಲ್ಲಿವೆ.
ರಾಜ್ಯದ ಹಲವೆಡೆ ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಆದರೆ ಅಧಿಕ ಚಳಿ ವಾತಾವರಣವಿತ್ತು. ಅದಾಗ್ಯೂ ದ್ರಾಕ್ಷಿ ಬೆಳೆಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ದ್ರಾಕ್ಷಿ ಹಾಗೂ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಬೆಳೆಗಾರರೂ ಅಧಿಕ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಹಾಪ್ಕಾಮ್ಸ್ ನಲ್ಲಿ ಬೃಹತ್ ಮಟ್ಟದ ದ್ರಾಕ್ಷಿ ಮೇಳ ಆಯೋಜಿಸಿದೆ.
ಚಳಿಗಾಲದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲು ಕೆಲ ಸಮಸ್ಯೆಗಳು ಎದುರಾಗುತ್ತವೆ. ಅಧಿಕ ಚಳಿ ಹಾಗೂ ಮಂಜು ಬಿದ್ದರೆ ದ್ರಾಕ್ಷಿ ಹಣ್ಣು ಹಾಳಾಗುವ ಸಾಧ್ಯತೆಗಳು ಹೆಚ್ಚು. ಆದರೀಬಾರಿ ಅಧಿಕ ಚಳಿ ಇದ್ದರೂ ಮಂಜು ಇಬ್ಬನಿ ದ್ರಾಕ್ಷಿ ಬೆಳೆಗೆ ತೊಂದರೆಯನ್ನುಂಟು ಮಾಡಿಲ್ಲ.ಹೀಗಾಗಿ ಬೆಳೆಗೆ ರೋಗ ಬಾಧಿಸಿಲ್ಲ. ಹಣ್ಣಿನ ಗುಣಮಟ್ಟವೂ ಉತ್ತಮವಾಗಿದೆ. ಬೆಳೆಯೂ ಚೆನ್ನಾಗಿ ಬಂದಿದೆ.
ಪ್ರತಿವರ್ಷ ನಡೆಯಿವ ದ್ರಾಕ್ಷಿ ಮೇಳಕ್ಕೆ ನಾವು ಕಾಯ್ತಾ ಇರ್ತಿವಿ. ಇಲ್ಲಿ ದ್ರಾಕ್ಷಿಗಳನ್ನ ತೆಗೆದುಕೊಳ್ಳಲು ಬೇರೆ ಬೇರೆ ಏರಿಯಾಗಳಿಂದ ಬರ್ತಿದ್ದಾರೆ. ತೋಟಾಗಾರಿಕೆ ಇಲಾಖೆಯಿಂದ 10 % ಡಿಸ್ಕಂಟ್ ಸಹ ಕೊಟ್ಟಿದ್ದಾರೆ.
ಒಟ್ಟಾರೆ ಈ ಬಾರಿ ಮಳೆ ಯಾಗದದಿದ್ದರೂ ದ್ರಾಕ್ಷಿ ಮತ್ತು ಕಲ್ಲಂಗಡಿ ಫಸಲು ಚನ್ನಾಗಿ ಬಂದಿದೆ. ಇದರಿಂದ ಗ್ರಾಹಕರಿಗೂ ತುಂಬಾನೇ ಖುಷಿಯಾಗಿ ದ್ರಾಕ್ಷಿ ಕಲ್ಲಂಗಡಿ ಖರೀದಿ ಮಾಡಲು ಮುಂದಾಗಿದ್ದಾರೆ.. ಮತ್ತೆ ಯಾಕೆ ತಡ ಈ ಮೇಳ ಇನ್ನು ೨೯ ರ ವರೆಗೂ ಇರುತ್ತದೆ. ನೀವು ಒಮ್ಮೆ ಭೇಟಿ ಕೊಟ್ಟು ದ್ರಾಕ್ಷಿಯನ್ನು ಸವಿಯಿರಿ..