ಯುವಕರಿಗೆ ಸುವರ್ಣಾವಕಾಶ ಬಂದಿದೆ. ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆಯಲ್ಲಿ 44,228 ‘ಗ್ರಾಮೀಣ ಅಂಚೆ ಸೇವಕ’ ಹಾಗೂ ‘ಬ್ರಾಂಚ್ ಪೋಸ್ಟ್ ಮಾಸ್ಟರ್” ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಗ್ರಾಮೀಣ ಅಂಚೆ ಸೇವಕ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು.
ಇದೇ ಆಗಸ್ಟ್ 5 ಅರ್ಜಿ ಸಲ್ಲಿಸಲು ಕೊನೆಯ ದಿನ.
23 ಅಂಚೆ ವೃತ್ತಗಳ ವ್ಯಾಪ್ತಿಯಲ್ಲಿ ಈ ನೇಮಕಾತಿ ನಡೆಯುತ್ತಿದ್ದು ಕರ್ನಾಟಕ ಅಂಚೆ ವೃತ್ತಕ್ಕೆ 1,940 ಹುದ್ದೆಗಳಿವೆ. ಅಂಚೆ ಇಲಾಖೆಯಲ್ಲಿ ಕರ್ನಾಟಕ ವೃತ್ತದ ವ್ಯಾಪ್ತಿಯಲ್ಲಿ 37 ವಿಭಾಗಗಳಿವೆ.
ಕನಿಷ್ಠ 10 ನೇ ತರಗತಿ (ಎಸ್ಎಸ್ಎಲ್ಸಿ) ಅಥವಾ ತತ್ಸಮಾನವಾದ ವಿದ್ಯಾರ್ಹತೆ ಹೊಂದಿರುವ ಅರ್ಹ ಪುರುಷ, ಮಹಿಳೆ ಹಾಗೂ ತೃತಿಯ ಲಿಂಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ₹100 ಇದ್ದು, ಎಸ್ಸಿ/ಎಸ್ಟಿ, ಮಹಿಳಾ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ಇದೆ.
ಆಸಕ್ತರು ದಿನಕ್ಕೆ ನಾಲೈದು ಗಂಟೆ ಕೆಲಸ ಮಾಡಲು ಸಿದ್ದರಾಗಿರಬೇಕು. ಕೆಲಸ ಮಾಡಲು ಇಚ್ಚಿಸುವ ವಿಭಾಗ ಹಾಗೂ ಆಯಾ ಗ್ರಾಮ, ಪ್ರದೇಶಗಳ ಬಗ್ಗೆ ಉತ್ತಮ ಜ್ಞಾನ, ಸಂಪರ್ಕ, ಸ್ಥಳೀಯ ಭಾಷೆ ಬಲ್ಲವರಾಗಿರಬೇಕು. ಸೈಕಲ್ ಅಥವಾ ದ್ವಿಚಕ್ರ ವಾಹನ ಚಲಾಯಿಸಲು ತಿಳಿದಿರಬೇಕು. ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.