ಬೆಂಗಳೂರು : ಕರ್ನಾಟಕದಾದ್ಯಂತ ಇಂದಿನಿಂದಲೇ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆ ಆರಂಭವಾಗಿದೆ.ಗೃಹಜ್ಯೋತಿ’ ಯೋಜನೆ ಇಂದು ಮಧ್ಯರಾತ್ರಿಯಿಂದ ಅಧಿಕೃತವಾಗಿ ಆರಂಭವಾಗಲಿದ್ದು, ರಾತ್ರಿ ಒಂದು ಗಂಟೆಯಿಂದ ಪ್ರತಿ ಯೂನಿಟ್ ಕೌಂಟ್ ಆಗಲಿದೆ.
12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ. 12 ತಿಂಗಳ ಸರಾಸರಿ ಬಳಕೆ 200 ಯೂನಿಟ್ ಇದ್ದರೆ ಫ್ರೀ ವಿದ್ಯುತ್ ಸಿಗಲಿದೆ. ಒಂದುವೇಳೆ 200 ಯೂನಿಟ್ ಗಿಂತ ಹೆಚ್ಚು ಬಳಸಿದರೆ ಮಾತ್ರ ಬಿಲ್ ಬರಲಿದೆ.ಇನ್ನೂ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ 5 ಗ್ಯಾರಂಟಿ ಗಳಲ್ಲಿ ಗೃಹಜ್ಯೋತಿ’ ಯೋಜನೆ ಕೂಡ ಒಂದು. ಈ ಯೋಜನೆ ನೋಂದಣಿಗೆ ರಾಜ್ಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜುಲೈ ತಿಂಗಳ ವಿದ್ಯುತ್ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ. ಬರುವ ಕರೆಂಟ್ ಬಿಲ್ ನಲ್ಲಿ ಶಕ್ತಿ ಯೋಜನೆಯಂತೆ ಗೃಹಜ್ಯೋತಿಯ ಉಚಿತ ಬಿಲ್ ಎಂದು ಹೆಸರು ಬರುವ ಸಾಧ್ಯತೆಗಳಿವೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ನೀಡಲಾಗುತ್ತದೆ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಫ್ರಿ ವಿದ್ಯುತ್ ಸಿಗಲಿದೆ. 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ. 12 ತಿಂಗಳ ಸರಾಸರಿಯ ಬಿಲ್ನಲ್ಲಿ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಿದೆ. ಇನ್ನು ಈ ಗೃಹಜ್ಯೋತಿ ಅರ್ಜಿ ಸಲ್ಲಿಕೆಯನ್ನ ಜೂನ್ 18 ರಿಂದ ಆರಂಭ ಮಾಡಲಾಗಿದ್ದು, ಗೃಹಜ್ಯೋತಿಯ ಫಲಾನುಭವಿಗಳು ಒಟ್ಟು 2.14 ಕೋಟಿಯಷ್ಟು ಜನರಿದ್ದಾರೆ. ಈ ಪೈಕಿ ಒಟ್ಟು 11 ದಿನಗಳಲ್ಲಿ ಒಟ್ಟು 8099932 ರಷ್ಟು ಜನರು ಅರ್ಜಿ ಹಾಕಿದ್ದಾರೆ. ಇನ್ನು 1,33 00068 ಕೋಟಿಯಷ್ಟು ಜನ ನೊಂದಾಣಿಗೆ ಅರ್ಜಿ ಹಾಕಬೇಕಿದೆ.