ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಭರ್ಜರಿ ಬ್ಯಾಟ್ ಬೀಸಿದ್ದಾರೆ.
ಸಣ್ಣ ವಿಚಾರಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ಬೇಕಿಲ್ಲ ಎನ್ನುವ ಮೂಲಕ ಬಿಜೆಪಿ,ಜೆಡಿಎಸ್ ನಾಯಕರ ಹೋರಾಟಕ್ಕೆ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೊಡೆತ ಕೊಟ್ಟಿದ್ದಾರೆ.ಜಿ.ಟಿ.ದೇವೇಗೌಡ ಹೇಳಿಕೆ ಸಿಎಂ ಸಿದ್ದರಾಮಯ್ಯಗೆ ಬುಸ್ಟ್ ಕೊಟ್ಟಿದ್ರೆ,ಕೈ ನಾಯಕರು ಇದನ್ನೇ ನಾವು ಹೇಳುತ್ತಿದ್ದೇವು ಎಂದು ಮೀಸೆ ತಿರುಗಲು ಪ್ರಾರಂಭಿಸಿದ್ದಾರೆ.
ಮೂಡಾ ವಿಚಾರದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.ಜಿ.ಟಿ.ದೇವೇಗೌಡ ಇವತ್ತು ನೀಡಿದ ಹೇಳಿಕೆ ಪ್ರತಿಪಕ್ಷ ಹೋರಾಟವನ್ನೇ ಕುಗ್ಗಿಸುವಂತೆ ಮಾಡಿದೆ.ಸಣ್ಣ ವಿಚಾರಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾದ ಅವಶ್ಯಕತೆಯಿಲ್ಲ ಅಂತ ಸಿದ್ದು ಪರ ಸಮರ್ಥನೆ ಮಾಡಿಕೊಂಡಿದ್ದಾರೆ.ಎಫ್ ಐಆರ್ ಆದವರೆಲ್ಲರು ರಾಜೀನಾಮೆ ಕೊಡಿ ನನ್ನನ್ನೂ ಸೇರಿಸಿ ತನಿಖೆ ಮಾಡಿ ಎಂಬ ಮಾತು ಪ್ರತಿಪಕ್ಷಗಳಿಗೆ ಛಡಿಯೇಟು ಕೊಟ್ಟಂತಾಗಿದೆ.ಅದ್ರಲ್ಲೂ ತಮ್ಮ ಪಕ್ಷದ ಕೇಂದ್ರ ಸಚಿವ ಕುಮಾರಸ್ವಾಮಿಗೆ ಪರೋಕ್ಷವಾಗಿ ಜಿ.ಟಿ.ದೇವೇಗೌಡ ತಿರುಗೇಟು ನೀಡಿದ್ದಾರೆ.ತಮ್ಮವಿರುದ್ಧವೂ ಎಫ್ ಐಆರ್ ಆಗಿದೆಯಲ್ಲನೀವು ರಾಜೀನಾಮೆ ಕೊಡಿ ಎಂದು ಅಣಕಿಸಿದಂತಿದೆ.ಗೌಡರ ಈ ಸ್ಟೆಟ್ ಮೆಂಟ್ ಸೊರಗಿಹೋಗಿದ್ದ ಕಾಂಗ್ರೆಸ್ ನಾಯಕರಿಗೆ ಪುಷ್ಠಿನೀಡಿದಂತಾಗಿದೆ.
ಇನ್ನು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕೊಟ್ಟ ಹೇಳಿಕೆಗಳು ಜೆಡಿಎಸ್ ನಾಯಕರಿಗೆ ತೀವ್ರ ಮುಜುಗರ ತರಿಸಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ನಾನು ಕೂಡ ಸಿದ್ದರಾಮಯ್ಯ ರಾಜೀನಾಮೆ ಕೇಳಿರಲಿಲ್ಲ.ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡು ಸಾಕ್ಷಿ ನಾಶ ಮಾಡುತ್ತಿದ್ದರಲ್ಲ ಇದ್ರ ಬಗ್ಗೆ ನಾನು ರಾಜೀನಾಮೆ ಕೇಳಿದ್ದೀನಿ ಎಂದು ಹೆಚ್ಡಿಕೆ ಹೇಳಿದ್ದಾರೆ.
ಇನ್ನು ಜೆಡಿಸ್ ಶಾಸಕ ಜಿ.ಟಿ.ದೇವೇಗೌಡ ತಮ್ಮ ಪರ ಬ್ಯಾಟ್ ಬೀಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಫುಲ್ ಖುಷಿಯಾಗಿದ್ದಾರೆ.ಎಫ್ ಐ ಆರ್ ಆದ್ಮೇಲೆ ನಿನ್ನೆಯವರೆಗೂ ಮುಂಖಾಗಿದ್ದ ಸಿದ್ದರಾಮಯ್ಯ ಇಂದು ವೇದಿಕೆ ಮೇಲೆಯೇ ಜಿ.ಟಿ.ದೇವೇಗೌಡ ಹಾಡಿ ಹೊಗಳುತ್ತಿದ್ದಂತೆ,ಸಿದ್ದರಾಮಯ್ಯ ಮುಖದಲ್ಲಿ ಸಂತಸ ತುಂಬಿತ್ತು.ಜಿ.ಟಿ.ದೇವೇಗೌಡ ಮುಡಾ ಸದಸ್ಯರಿದ್ದಾರೆ.ಹೀಗಾಗಿ,ಅವರು ಸತ್ಯ ಹೇಳಿದ್ದಾರೆ.ನಾನು ಯಾವುದೇ ತಪ್ಪು ಮಾಡಿಲ್ಲ.5 ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಇನ್ನು ಜಿ.ಟಿ.ದೇವೇಗೌಡ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಬುಸ್ಟ್ ಕೊಟ್ಟಿದೆ.ಇಷ್ಟು ದಿನ ನಾವು ಹೇಳುತ್ತಿದ್ದು ಇದನ್ನೇ.ಜಿ.ಟಿ.ದೇವೇಗೌಡ ಹೇಳಿಕೆಯನ್ನ ನಾವು ಸ್ವಾಗತ ಮಾಡ್ತೀವಿ ಎಂದಿದ್ದಾರೆ.
ಒಟ್ನಲ್ಲಿಮೂಡಾ ಪ್ರಕರಣದಲ್ಲಿ ಸೊರಗಿಹೋಗಿದ್ದ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡರ ಟಾನಿಕ್ ಕೊಟ್ಟಿದ್ದಾರೆ.ಸಿದ್ದರಾಮಯ್ಯ ಪರಬ್ಯಾಟ್ ಬೀಸುವ ಮೂಲಕ ಕೈನಾಯಕರಿಗೆ ಧ್ವನಿ ನೀಡಿದ್ದಾರೆ.ಎಸ್.ಟಿ.ಸೋಮಶೇಖರ್,ಜಿಟಿಡಿ ಮಾತನ್ನೇ ಬಂಡವಾಳ ಮಾಡಿಕೊಂಡು ಪ್ರತಿಪಕ್ಷಗಳವಿರುದ್ಧ ತಿರುಗಿಬೀಳೋಕೆ ಕೈನಾಯಕರು ಮುಂದಾಗಿದ್ದಾರೆ.