ಬೆಂಗಳೂರು:- ಅನ್ನದಾತನಿಗೆ ಅವಮಾನ ಮಾಡಿದ GT ಮಾಲ್ ಕ್ಲೋಸ್ ಮಾಡಲಾಗಿದೆ.
ಮಾಲ್ ಬಾಗಿಲಿಗೆ ಬೀಗ ಜಡಿಯಲಾಗಿದ್ದು, ʼಆಸ್ತಿ ತೆರಿಗೆ (Property Tax) ಪಾವತಿಸದ ಕಾರಣಕ್ಕಾಗಿ ಮಾಲ್ ಅನ್ನು ಸೀಲ್ ಮಾಡಲಾಗಿದೆʼ ಎಂದು ಬಾಗಿಲಿಗೆ ಅಂಟಿಸಲಾದ ನೋಟೀಸ್ನಲ್ಲಿ ತಿಳಿಸಲಾಗಿದೆ.
2023-24ನೇ ಸಾಲಿನ 1,78,23,560 ಕೋಟಿ ರೂ. ಆಸ್ತಿ ತೆರಿಗೆ ಬಾಕಿಯಿದ್ದು, ಪ್ರಸಕ್ತ ಸಾಲಿನಲ್ಲಿ 1,78,23,460 ಆಸ್ತಿ ತೆರಿಗೆ ಪಾವತಿಸಬೇಕಿದೆ. ತೆರಿಗೆ ಪಾವತಿಸಿಲ್ಲ ಅಂತ ಬಿಬಿಎಂಪಿ ಜಿಟಿ ಮಾಲ್ ಅನ್ನು ಬಂದ್ ಮಾಡಿದೆ. ಬಿಬಿಎಂಪಿಯ ಕಂದಾಯ ಇಲಾಖೆ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿದ್ದು, ತೆರಿಗೆ ಕಟ್ಟುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ತೆರಿಗೆ ಪಾವತಿಸಿದ ಮೇಲೆ ಮಾಲ್ ತೆರೆಯಲು ಒಪ್ಪಿಗೆ ನೀಡಲಿದ್ದಾರೆ
ಬಿಬಿಎಂಪಿ ನೋಟಿಸ್ಗೆ ಲಿಖಿತ ಉತ್ತರ ನೀಡಿರುವ ಜಿಟಿ ಮಾಲ್ ಮಾಲಿಕರು, ತಪ್ಪೆಸಗಿದ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಪಂಚೆ ಉಟ್ಟು ಬಂದ ರೈತ ಮಾಲ್ ಎಂಟ್ರಿ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ನೋಟೀಸ್ ನೀಡಿದ್ದು, ಅದಕ್ಕೆ ಉತ್ತರ ನೀಡಿ ಪತ್ರ ಬರೆದಿದ್ದಾರೆ