ಮೊಹಾಲಿ : ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸದ್ಯ ಆರೆಂಜ್ ಕ್ಯಾಪ್ ಒಡೆಯನಾಗಿರುವ ಗಬ್ಬರ್ ಶಿಖರ್ ಧವನ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿ ಅಜೇಯ 99 ರನ್ ಗಳ ಕಾಣಿಕೆ ನೀಡಿದರೂ, ತಂಡ 8 ವಿಕೆಟ್ ಗಳಿಂದ ಸೋಲುಂಡಿತ್ತು. ಪಂಜಾಬ್ ಪಡೆ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಈಗ ಗುರುವಾರ ಡಿಫೆಂಡಿಂಗ್ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಮತ್ತೆ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿ ಶುಭಾರಂಭ ಕಂಡಿದ್ದ ಗುಜರಾತ್ ಟೈಟನ್ಸ್, ನಂತರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 6 ವಿಕೆಟ್ ನಿಂದ ಮಣಿಸಿತ್ತು. ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಜಿ.ಟಿ ಗೆಲುವಿನ ಹೊಸ್ತಿಲಲ್ಲಿ ನಿಂತಿತ್ತಾದರೂ ಅಂತಿಮ ಓವರ್ ನಲ್ಲಿ ಕೆಕೆಆರ್ ನ ಸ್ಫೋಟಕ ಆಟಗಾರ ರಿಂಕು ಸಿಂಗ್ ಸತತ 5 ಸಿಕ್ಸರ್ ಗಳನ್ನು ಸಿಡಿಸಿ ಗೆಲುವನ್ನು ಕಸಿದುಕೊಂಡರು. ಈಗ ಮತ್ತೆ ಗೆಲುವಿನ ನಿರೀಕ್ಷೆಯಲ್ಲಿರುವ ಹಾರ್ದಿಕ್ ಪಾಂಡ್ಯ ಪಡೆ ಶಿಖರ್ ಧವನ್ ಸಾರಥ್ಯದ ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸಲು ಹೊರಟಿದ್ದು, ಜಯದ ಹುಮ್ಮಸ್ಸಿನಲ್ಲಿದೆ.
IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ : ರಾಜಸ್ಥಾನ್ ರಾಯಲ್ಸ್ಗೆ 3 ರನ್ಗಳ ರೋಚಕ ಜಯ
ಜಯದ ಹಳಿಗೆ ಮರಳುವ ತವಕದಲ್ಲಿ ಜಿ.ಟಿ
ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ಜ್ವರದಿಂದ ಬಳಲಿದ್ದ ಜಿ.ಟಿ ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ. ಇದರಿಂದ ಕಳೆದ ಪಂದ್ಯದಲ್ಲಿ ಸ್ಫೋಟಕ ಇನಿಂಗ್ಸ್ ಕಟ್ಟಿದ ವಿಜಯ್ ಶಂಕರ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದ್ದರೂ, ಇಂಪ್ಯಾಕ್ ಪ್ಲೇಯರ್ ಆಗಿ ಬ್ಯಾಟ್ ಮಾಡುವ ಅವಕಾಶ ಹೊಂದಿದ್ದಾರೆ. ಒಟ್ಟಾರೆ ಟೈಟನ್ಸ್ ಈ ಪಂದ್ಯದಲ್ಲಿ ಗೆದ್ದು, ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
ಪಂಜಾಬ್ಗೆ ಸ್ಟಾರ್ ಪವರ್
ಇನ್ನು ಆರಂಭಿಕ 3 ಪಂದ್ಯದ ಪ್ಲೇಯಿಂಗ್ XIನಿಂದ ಹೊರಗುಳಿದಿದ್ದ ಪಂಜಾಬ್ ಕಿಂಗ್ಸ್ ನ ಸ್ಟಾರ್ ಆಟಗಾರರಾದ ಲಿಯಾಮ್ ಲಿವಿಂಗ್ಸ್ಟೋನ್, ಮ್ಯಾಥ್ಯೂ ಶಾರ್ಟ್ ಹಾಗೂ ಕಗಿಸೊ ರಬಾಡ ತಂಡಕ್ಕೆ ಮರಳಿದ್ದು, ಪಿಬಿಕೆಎಸ್ ಶಕ್ತಿ ಮತ್ತಷ್ಟು ಹೆಚ್ಚಿದೆ. ಕಳಪೆ ಪ್ರದರ್ಶನ ತೋರುತ್ತಿರುವ ಸಿಕಂದರ್ ರಾಜಾ, ರಾಜಪಕ್ಷ, ನೇಥನ್ ಎಲೀಸ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಪಂದ್ಯದ ವಿವರ
ಗುಜರಾತ್ ಟೈಟನ್ಸ್ VS ಪಂಜಾಬ್ ಕಿಂಗ್ಸ್
ಸ್ಥಳ: ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಕ್ರೀಡಾಂಗಣ
ದಿನಾಂಕ: ಗುರುವಾರ (ಏಪ್ರಿಲ್ 13) ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ
ಮೊಹಾಲಿ ಪಿಚ್ ವರದಿ
ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಸಮತೋಲಿತವಾಗಿದ್ದು, ಆರಂಭದಲ್ಲಿ ಬೌಲರ್ಗಳು ಪ್ರಾಬಲ್ಯ ಮೆರೆದರೂ ಪಂದ್ಯ ಸಾಗುತ್ತಿದ್ದಂತೆ ಬ್ಯಾಟರ್ ಗಳಿಗೆ ಸಹಕಾರಿ ಆಗಲಿದ್ದು, ಹೈ-ಸ್ಕೋರಿಂಗ್ ಗೇಮ್ ನಿರೀಕ್ಷೆ ಮಾಡಬಹುದು. 210 ಉತ್ತಮ ಮೊತ್ತವಾಗಲಿದ್ದು, ಟಾಸ್ ಗೆಲ್ಲುವ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ತಂಡದ ಮೇಲೆ ಒತ್ತಡ ಹೇರಬಹುದು
ಮುಖಾಮುಖಿ ಫಲಿತಾಂಶ
ಒಟ್ಟು ಪಂದ್ಯಗಳು: 02
ಗುಜರಾತ್: 01
ಪಂಜಾಬ್: 01
ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ XI:
1. ಶಿಖರ್ ಧವನ್ (ನಾಯಕ)
2. ಪ್ರಭಸಿಮ್ರನ್ ಸಿಂಗ್
3. ಮ್ಯಾಥ್ಯೂ ಶಾರ್ಟ್
4. ಲಿಯಾಮ್ ಲಿವಿಂಗ್ಸ್ಟೋನ್
5ಜಿತೇಶ್ ಶರ್ಮಾ (ವಿಕೆಟ್ ಕೀಪರ್)
6. ಶಾರುಖ್ ಖಾನ್
7. ಸ್ಯಾಮ್ ಕರ್ರನ್
8. ಹರಪ್ರೀತ್ ಬ್ರಾರ್
9. ರಾಹುಲ್ ಚಹರ್
10. ಕಗಿಸೊ ರಬಾಡ
11. ಅರ್ಷ್ದೀಪ್ ಸಿಂಗ್
ಗುಜರಾತ್ ಟೈಟನ್ಸ್ ಸಂಭಾವ್ಯ ಪ್ಲೇಯಿಂಗ್ XI:
1. ವೃದ್ಧಿಮಾನ್ ಸಹಾ (ವಿ. ಕೀ.)
2. ಶುಭಮನ್ ಗಿಲ್
3. ಸಾಯ್ ಸುದರ್ಶನ್
4. ಹಾರ್ದಿಕ್ ಪಾಂಡ್ಯ (ನಾಯಕ)
5. ಡೇವಿಡ್ ಮಿಲ್ಲರ್
6. ರಾಹುಲ್ ತೆವಾಟಿಯಾ
7. ರಶೀದ್ ಖಾನ್
8. ಮೊಹಮ್ಮದ್ ಶಮಿ
9. ಜೋಶುವಾ ಲಿಟ್ಲ್
10. ಅಲ್ಝಾರಿ ಜೋಸೆಫ್
11. ಯಶ್ ದಯಾಲ್