ಮುಂಬರುವ 2025ರ ಆರ್ಥಿಕ ವರ್ಷಕ್ಕೆ ಭಾರತೀಯ ಐಟಿ ವೃತ್ತಿಪರರಿಂದ ಹೆಚ್ಚು ಬೇಡಿಕೆಯಿರುವ H-1B ವೀಸಾಗಳ ಆರಂಭಿಕ ನೋಂದಣಿ ಅವಧಿಯು ಮಾರ್ಚ್ 22 ರಂದು ಮುಕ್ತಾಯಗೊಳ್ಳಲಿದೆ ಎಂದು ಫೆಡರಲ್ ಏಜೆನ್ಸಿ ಮಾಹಿತಿ ನೀಡಿದೆ.
H-1B ವೀಸಾ ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ. 2025 ರ ಹಣಕಾಸು ವರ್ಷದಲ್ಲಿ ವಿದೇಶಿ ಅತಿಥಿ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆಯಿರುವ H-1B ವೀಸಾಗಳ ಆರಂಭಿಕ ನೋಂದಣಿ ಅವಧಿಯು ಮಾರ್ಚ್ 22 ರಂದು ಮದ್ಯಾಹ್ನ 12ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ತಿಳಿಸಿದೆ.