ಕೊಪ್ಪಳ: ಸಚಿವ ಹಾಲಪ್ಪ ಆಚಾರ್ (Halappa Achar) ಅಳಿಯ ಗೌರಾ ಬಸವರಾಜ (Goura Basavaraj) ನೇತೃತ್ವದಲ್ಲಿ ಬಿಜೆಪಿ (BJP) ಕಾರ್ಯಕರ್ತರು ಯಲಬುರ್ಗಾದಲ್ಲಿ (Yalaburga) ಸೀರೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ಕಾರ್ಯಕರ್ತರು ಆರೋಪಿಸಿದ್ದಾರೆ.
ಸಚಿವ ಹಾಲಪ್ಪ ಆಚಾರ್ ಫೋಟೋ ಇರುವ ಚೀಲದಲ್ಲಿ ಕ್ಷೇತ್ರದ ಗ್ರಾಮಗಳ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಲಾಗುತ್ತಿದೆ. ಚೀಲದ ಮೇಲೆ ಅಳಿಯ ಗೌರಾ ಬಸವರಾಜ ಅವರ ಹೆಸರನ್ನು ಸಂಕ್ಷಿಪ್ತವಾಗಿ ಗೌರಾ ಎಂದು ಬರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಅಳಿಯ ಹಾಗೂ ಮಾವ ಸೇರಿ ಕೇವಲ 60 ರೂ. ಸೀರೆ ಹಂಚಿ ಮತ ಸೆಳೆಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ (Election) ಟೀ ಶರ್ಟ್ ಹಂಚಿದ್ದರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗಳು ಸೀರೆ ಸೀಜ್ ಮಾಡಿದ್ದಾರೆ ಎನ್ನಲಾಗಿದೆ. ಮುಂದುವರೆದು ಕಾಂಗ್ರೆಸ್ ಪಡೆ ಸೀರೆ ಹಂಚಿಕೆ ವಿರೋಧಿಸಿ ಮಾರ್ಚ್ 17ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದೆ.