ಬಿಗ್ ಬಾಸ್ ಕನ್ನಡಸ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಸಿಂಗರ್ ಹನುಮಂತ ಬೇರೆಲ್ಲಾ ಸ್ಪರ್ಧಿಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಆರಂಭದಿಂದಲೂ ಪ್ರೇಕ್ಷಕರ ಮನಗೆದ್ದ ಹನುಮಂತ ದೊಡ್ಮನೆಯಲ್ಲಿ ಪ್ರತಿವಾರವೂ ಸೇಫ್ ಆಗ್ತಿದ್ದಾರೆ. ನೋಡುಗರು ಆತನನ್ನು ದೊಡ್ಮನೆಯಲ್ಲಿಯೇ ಉಳಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಸಿಂಗರ್ ಹನುಮಂತ ಬಿಗ್ ಬಾಸ್ ಆಟವನ್ನು ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಧನರಾಜ್ ಧೈರ್ಯದ ಮಾತುಗಳನ್ನು ಹೇಳಿದ್ದಾರೆ.
‘ಬಿಗ್ ಬಾಸ್ಗೆ ನಾನು ನೇರವಾಗಿ ಹೇಳಿಬಿಡುತ್ತೇನೆ. ಕಷ್ಟ ಆಗುತ್ತಿದೆ ನನ್ನನ್ನು ಕಳಿಸಿ ಬಿಡಿ’ ಎಂದು ಹನುಮಂತ ಅವರು ಹೇಳಿದ್ದಾರೆ. ‘ನೀನು ಯಾಕೆ ಶೋಭಕ್ಕನ ಥರ ಆಡುತ್ತಿದ್ದೀಯ’ ಎಂದು ಧನರಾಜ್ ಅವರು ಹೇಳಿದರು. ಯಾಕೆಂದರೆ, ಶೋಭಾ ಶೆಟ್ಟಿ ಕೂಡ ಇದೇ ರೀತಿ ಮಾತನಾಡಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ತಮ್ಮ ಮನಸ್ಸಿನ ಗೊಂದಲ ಏನು ಎಂಬುದನ್ನು ಹನುಮಂತ ವಿವರಿಸಿದ್ದಾರೆ.
‘ಶೋಭಕ್ಕನ ರೀತಿ ಏನೂ ಇಲ್ಲ. ನಾವು ಬಾಯಿ ಸತ್ತವರ ರೀತಿ ಇರೋಕೆ ಆಗಲ್ಲ. ಮಾತಾಡೋಕೆ ಬರುತ್ತಿಲ್ಲ. ತಲೆ ಸ್ವಿಚ್ ಆಫ್ ಆಗಿದೆ’ ಎಂದರು. ಅದಕ್ಕೆ ಧನರಾಜ್ ಅವರು ಬುದ್ಧಿ ಹೇಳಿದ್ದಾರೆ.‘ಹಾಡಲ್ಲೇ ಉತ್ತರ ಕೊಡುತ್ತೀಯ ದೋಸ್ತಾ. ವಾರ ಪೂರ್ತಿ ಮಾತಾಡುವ ನೀನು ವೀಕೆಂಡ್ ನಲ್ಲಿ ಯಾಕೆ ಮಾಡಲ್ಲ ಅಂತ ಅಷ್ಟೇ ಹೇಳಿದ್ದು’ ಎಂದಿದ್ದಾರೆ ಧನರಾಜ್. ‘ಸುದೀಪ್ ಸರ್ ಹತ್ತಿರ ಟ್ರೇನಿಂಗ್ ತೆಗೆದುಕೊಂಡು ನಾವು ಇಲ್ಲಿಗೆ ಬರಬೇಕಿತ್ತು’ ಎಂದಿದ್ದಾರೆ ಹನುಮಂತ.
ಹಳ್ಳಿಯಿಂದ ಬಂದ ಹನುಮಂತನಿಗೆ ಸಿಟಿ ಜೀವನದ ಅಷ್ಟಾಗಿ ಪರಿಚಯ ಇಲ್ಲ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದಾಗ ಅವರಿಗೆ ಎಲ್ಲವೂ ಹೊಸದಾಗಿತ್ತು. ಆದರೆ ದೊಡ್ಮನೆಗೆ ಎಂಟ್ರಿಕೊಟ್ಟ ಕೆಲವೇ ವಾರಗಳಲ್ಲಿ ಹನುಮಂತ ಯಾರು ಊಹಿಸಿರದ ರೀತಿಯಲ್ಲಿ ಬದಲಾಗಿದ್ದಾರೆ. ಆದರೆ ಫಿನಾಲೆ ಹತ್ತಿರ ಆಗುತ್ತಿರುವಾಗ ಅವರು ಆಟ ತೊರೆಯುವ ಬಗ್ಗೆ ಮಾತನಾಡಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.