ಬಿಗ್ ಬಾಸ್ ಕನ್ನಡ 11ರ ವಿನ್ನರ್ ಆಗಿ ಕುರಿಗಾಹಿ ಹನುಮಂತ ಹೊರಹೊಮ್ಮಿದ್ದಾರೆ. ಟ್ರೋಫಿ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್ ಅವರ ಕಾಲಿಗೆ ಬಿದ್ದು ಹಳ್ಳಿ ಹೈದ ಆಶೀರ್ವಾದ ಪಡೆದಿದ್ದಾರೆ.
ಹನುಮಂತ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ದಿನದಿಂದಲೂ ಈತನೇ ಬಿಗ್ ಬಾಸ್ ವಿನ್ನರ್ ಎಂದು ಹೇಳಲಾಗುತ್ತಿತ್ತು. ಅಂದುಕೊಂಡಂತೆ ಬಿಗ್ ಬಸ್ ಟ್ರೋಪಿ ಹನುಮಂತನ ಕೈ ಸೇರಿದೆ. ಸುದೀಪ್ ತಮ್ಮ ಬಲಭಾಗಕ್ಕೆ ಹನುಮಂತ ಹಾಗೂ ಎಡ ಭಾಗಕ್ಕೆ ತ್ರಿವಿಕ್ರಮ್ ಅವರನ್ನು ಹಿಡಿದು ನಿಂತಿದ್ದರು.
ಕೊನೆಗೂ ಸುದೀಪ್ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್ ಎಂದು ಘೋಷಿಸಿದರು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್ ಕಾಲಿಗೆ ಬಿದ್ದು ನಮಸ್ಕರಿಸಿದರು.
ಬಿಗ್ ಬಾಸ್ ಸೀಸನ್ ಹನ್ನೊಂದರ ಟ್ರೋಫಿ ಎತ್ತಿದ ಹನುಮಂತನಿಗೆ ಐದೂವರೆ ಕೋಟಿ ಕನ್ನಡಿಗರ ಆಶೀರ್ವಾದ ಸಿಕ್ಕಿದೆ. ಬಿಗ್ ಬಾಸ್ ಶುರುವಾದ ಹದಿನೈದು ದಿನಗಳ ನಂತರ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಎಂಟ್ರಿ ಕೊಟ್ಟಿದ್ದರು.