‘ಬಿಗ್ ಬಾಸ್ ಕನ್ನಡ’ದ 11ನೇ ಸೀಸನ್ ಶುರವಾಗಿ ಮೂರು ವಾರ ಕಳೆದಿದೆ. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದ್ದು ಈ ಮಧ್ಯೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೊಬ್ಬ ಸ್ಪರ್ಧಿ ಮನೆಯೊಳಗೆ ಕಾಲಿಟ್ಟಿದ್ದಾರೆ.
ಬಿಗ್ ಬಾಸ್ ಶೋ ಮೂರು ವಾರ ಪೂರ್ಣಗೊಳಿಸಿದೆ. ಹೀಗಿರುವಾಗಲೇ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಹೌದು, ದೊಡ್ಮನೆಯಲ್ಲಿ ಮಧ್ಯದಲ್ಲಿಯೇ ಇಬ್ಬರು ಎಲಿಮಿನೇಟ್ ಆದ ಕಾರಣದಿಂದಲೋ ಏನೋ ಹೊಸಬರನ್ನು ಒಳಗೆ ಕರೆ ತರಲಾಗಿದೆ. ಅಂದ ಹಾಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಎಂಟ್ರಿಕೊಟ್ಟಿರೋದು ಸಿಂಗರ್ ಹನುಮಂತ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ದೊಡ್ಮನೆಯಲ್ಲಿ ದೊಡ್ಡದಾಗಿ ಜಗಳ ನಡೆದ ಇಬ್ಬರು ಎಲಿಮಿನೇಟ್ ಆದರು. ಲಾಯರ್ ಜಗದೀಶ್ ಹಾಗೂ ರಂಜಿತ್ ಔಟ್ ಆದರು. ಈಗ ದೊಡ್ಮನೆ ಒಳಗೆ ಹನುಮಂತ ಎಂಟ್ರಿಕೊಟ್ಟಿದ್ದಾರೆ.
ಕಲರ್ಸ್ ಕನ್ನಡವು ಈಗ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಗಾಯಕ ಹನುಮಂತ ಅವರ ಆಗಮನ ಆಗಿದೆ. ಹನುಮಂತ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡ ‘ಸರೆಗಮಪ..’ರಿಯಾಲಿಟಿ ಶೋಗೆ ಬಂದಿದ್ದ ಅವರು ನಂತರ ಸಾಕಷ್ಟು ಜನಪ್ರಿಯತೆ ಪಡೆದರು. ‘ಕಾಮಿಡಿ ಕಿಲಾಡಿಗಳು’ ರೀತಿಯ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಅವರು ಕುರಿ ಕಾಯುತ್ತಾ ಇದ್ದವರು. ಅವರಿಗೆ ಈಗ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.
‘ಬಿಗ್ ಬಾಸ್’ಗೆ ಬಂದ ಕೂಡಲೇ ಅವರಿಗೆ ವಿಶೇಷ ಅಧಿಕಾರವೂ ಸಿಕ್ಕಿದೆ. ಅವರು ಕ್ಯಾಪ್ಟನ್ ಆಗಿದ್ದಾರೆ. ದೊಡ್ಮನೆಯಲ್ಲಿ ಕ್ಯಾಪ್ಟನ್ ಆದ ಅವರಿಗೆ ಅಭಿನಂದನೆ ತಿಳಿಸಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕೇವಲ ಫೈಟ್ಗಳು ಜಾಸ್ತಿ ಇದ್ದವು. ಇದು ಮಿತಿಮೀರಿದ್ದರಿಂದ ಯಾವುದೇ ಕಾಮಿಡಿ ಘಟನೆಗಳು ನಡೆಯುತ್ತಲೇ ಇರಲಿಲ್ಲ. ಈಗ ಹಾಸ್ಯ ಮಾಡುವ ಉದ್ದೇಶದಿಂದಲೇ ಅವರನ್ನು ಕರೆತರಲಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಶುರುವಾಗಿ ತಿಂಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿಯನ್ನು ಕೊಡಿಸಲಾಗುತ್ತದೆ. ಆದರೆ, ಈ ಬಾರಿ ಆ ರೀತಿ ಮಾಡಿಲ್ಲ. ವಾರದ ಮಧ್ಯದಲ್ಲೇ ಇಬ್ಬರು ಹೋಗಿದ್ದರಿಂದ ಮೂರೇ ವಾರಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯ ಆಗಮನ ಆಗಿದೆ.