ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ಸಾಕಷ್ಟು ಕಾರಣಕ್ಕೆ ಕುತೂಹಲ ಮೂಡಿಸಿದೆ.ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮನೆಯ ಕ್ಯಾಪ್ಟನ್ ಆಗಲು ಸಾಕಷ್ಟು ಕಷ್ಟ ಪಡಬೇಕು. ಆದ್ರೆ ದೊಡ್ಮನೆ ಒಳಗೆ ಕಾಲಿಡ್ತಿದ್ದಂಗೆ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದು ಸಿಂಗರ್ ಹನುಮಂತ. ಇದೀಗ ಹನುಮಂತ 2ನೇ ಬಾರಿಗೆ ಮತ್ತೆ ಕ್ಯಾಪ್ಟನ್ ಆಗಿ ದೊಡ್ಮನೆಯಲ್ಲಿ ಅಸಲಿ ಆಟ ಶುರು ಮಾಡಿದ್ದಾರೆ.
ಬಿಗ್ ಬಾಸ್ ಮನೆಯ 12 ಮಂದಿ ಸದಸ್ಯರಿಗೆ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ಮೊದಲ ಸುತ್ತಿನಲ್ಲಿ ಶಿಶಿರ್ ಅವರು ಹೊರಬಿದ್ದಿದ್ದಾರೆ.
ಸ್ಪರ್ಧಿಗಳು ಬೇರೆ ಸ್ಪರ್ಧಿಗಳ ಫೋಟೋಗಳನ್ನು ತಂದು ಇಟ್ಟಿದ್ದಾರೆ. ಸುರೇಶ್ ಹಾಗೂ ಮಂಜು ರೂಲ್ಸ್ ಬ್ರೇಕ್ ಮಾಡಿದ ಕಾರಣದಿಂದ ಇಬ್ಬರು ಗೇಮ್ ನಿಂದ ಹೊರಬಿದ್ದಿದ್ದಾರೆ. ಆ ಬಳಿಕ ಒಬ್ಬರನ್ನು ಮಾತ್ರ ಹೊರಗೆ ಇಡಬೇಕೆನ್ನುವ ನಿಟ್ಟಿನಲ್ಲಿ ಮಂಜು ಅವರನ್ನು ಮಾತ್ರ ಹೊರಗಿಟ್ಟಿದ್ದಾರೆ.
ರೂಲ್ ಬ್ರೇಕ್ ವಿಚಾರದಲ್ಲಿ ಮಂಜು – ತಿವಿಕ್ರಮ್ ನಡುವೆ ವಾಗ್ವಾದ ನಡೆದಿದೆ.
ಇವನು ನಾಟಕ ಆಡುತ್ತಾನೆ. ನಾನು ಶಿಶಿರ್ ಅವರ ಹೆಸರು ಹೇಳಿಲ್ಲ. ನನ್ನ ಮಗಳ ಮೇಲಾಣೆ. ಸುಳ್ಳು ಹೇಳಿದರೆ ಕರ್ಮ ತಟ್ಟುತ್ತದೆ. ಎಲ್ಲರಿಗೂ ಫಿಟ್ಟಿಂಗ್ ಇಟ್ಟು, ಒಂದಮ್ಕೆ ಹತ್ತು ಸುಳ್ಳು ಹೇಳ್ತಾ ಇರೋದು ಇವನೇ ಎಂದು ಸುರೇಶ್ ಅವರು ಮಂಜು ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಠಿಣವಾದ ಟಾಸ್ಕ್ ನಲ್ಲಿ ಎಲ್ಲರನ್ನೂ ಮೀರಿಸಿ ಹನುಮಂತ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಗೆ ಬಂದ ಎರಡು ವಾರದಲ್ಲೇ ಎರಡು ಬಾರಿ ಹನುಮಂತು ಅವರು ಕ್ಯಾಪ್ಟನ್ ಆಗಿದ್ದು ಇದೀಗ ಹನುಮಂತ ತಮ್ಮ ರಿಯಲ್ ಗೇಮ್ ಶುರು ಮಾಡಿದ್ದಾರೆ.