ಬಿಗ್ ಬಾಸ್ ಕನ್ನಡ ಸೀಸನ್ 11 ಬಿಗ್ ಬಾಸ್ ವಿನ್ನರ್ ಆಗಿ ಗಾಯಕ ಹನುಮಂತ ಕಪ್ ಗೆದ್ದಿದ್ದಾರೆ. ಎಲ್ಲರು ಅಂದುಕೊಂಡಂತೆ ಈ ಸೀಸನ್ ವಿನ್ನರ್ ಆಗಿ ಹನುಮಂತ ಟ್ರೋಪಿ ಎತ್ತಿ ಹಿಡಿದಿದ್ದಾರೆ. ಸರಳತೆ ಮೂಲಕವೇ ಸದ್ದು ಮಾಡಿದ್ದ ಹನುಮಂತ ವಿನ್ನರ್ ಆದರೆ ತ್ರಿವಿಕ್ರಮ್ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ವೈಲ್ಡ್ ಕಾರ್ಡ್ ಮೂಲಕ 50ನೇ ದಿನದಲ್ಲಿ ಬಂದಿದ್ದ ರಜತ್ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ.
ತ್ರಿವಿಕ್ರಮ್ ಅವರು ಬಿಗ್ ಬಾಸ್ ಆಟದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದರು. ಮಧ್ಯಮವರ್ಗದ ಹುಡುಗ ಎಂಬ ಕಾರಣಕ್ಕೆ ಅವರು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು. ಸಿನಿಮಾದಲ್ಲಿ, ಸೀರಿಯಲ್ಗಳಲ್ಲಿ ಮಿಂಚಬೇಕು ಎಂಬ ಕನಸು ಇಟ್ಟುಕೊಂಡಿದ್ದ ಅವರಿಗೆ ಒಂದು ಬ್ರೇಕ್ ಬೇಕಿತ್ತು. ಬಿಗ್ ಬಾಸ್ ವೇದಿಕೆ ಸಿಕ್ಕಿದ್ದಕ್ಕೆ ಅವರು ತುಂಬ ಖುಷಿ ಆಗಿದ್ದರು. ಈ ಶೋ ಗೆಲ್ಲಲೇಬೇಕು ಎಂದು ಅವರು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಕೊನೆಗೆ ರನರ್ ಅಪ್ ಪಟ್ಟಕ್ಕೆ ತೃಪ್ತಿಪಟ್ಟುಕೊಂಡರು.
ಬಿಗ್ ಬಾಸ್ ಆಟ ಶುರುವಾಗಿ 4 ವಾರ ಕಳೆದ ಮೇಲೆ ಸ್ಪರ್ಧಿಯಾಗಿ ದೊಡ್ಮನೆಗೆ ಹನುಮಂತ ಕಾಲಿಟ್ಟರು. ಮನೆಯ ಜಗಳ ನೋಡಿ ಹನುಮಂತು ಬೆಚ್ಚಿಬಿದ್ದಿದ್ದರು. ಆದರೂ ಛಲ ಬಿಡದೇ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಫಿನಾಲೆಗೆ ಮೊದಲು ಆಯ್ಕೆಯಾದರು.
ಇನ್ನೂ ಮನದರಸಿಯ ಬಗ್ಗೆ ಆಗಾಗ ಹನುಮಂತ ಹೇಳುತ್ತಿದ್ದರು. ‘ಬಿಗ್ ಬಾಸ್’ ಪಟ್ಟ ಗೆದ್ದರೆ ಅತ್ತಿ ಮನೆಗೆ ಹೋಗಿ ಹುಡುಗಿಯನ್ನು ಕೇಳುತ್ತೇನೆ ಎಂದು ಹನುಮಂತ ಹೇಳಿದ್ದರು. ಹಾಗಾದ್ರೆ ಕರ್ನಾಟಕದ ಜನತೆಗೆ ತಮ್ಮ ಹುಡುಗಿಯ ಪರಿಚಯ ಮಾಡಿಸಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ? ಎಂದು ಕಾದುನೋಡಬೇಕಿದೆ.