ಬೆಂಗಳೂರು: ಚಿನ್ನ ಬೆಳ್ಳಿ ಆಭರಣ ಮಾಲೀಕರಿಗೆ ಹಾಗೂ ಗಿರವಿ ಅಂಗಡಿಯವರಿಗೆ ಪೊಲೀಸರು ನೀಡುತ್ತಿರುವ ಕಿರುಕುಳದ ಕುರಿತಂತೆ ಪರಿಷತ್ ಶಾಸಕರಾದ ಟಿ. ಎ. ಶರವಣ. ಪ್ರಶ್ನೆ ಮಾಡಿದರು.
ಚಿನ್ನ ಬೆಳ್ಳಿ ಆಭರಣ ಅಂಗಡಿ ಮಾಲೀಕರ ಮೇಲೆ ದಿನೇ ದಿನೇ ದೌರ್ಜನ್ಯ ಹೆಚ್ಚುತ್ತಲೆ ಇದೆ ಈ ಬಗ್ಗೆ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಇದರ ಕುರಿತಂತೆ ಕಲಾಪದಲ್ಲಿ ಬೆಳಕು ಚೆಲ್ಲಿದರು.
ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ಮಾಡುವ ಮೊದಲೇ, ಅಂಗಡಿ ಮಾಲೀಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅವರಿಗೂ ಸ್ವಾಭಿಮಾನವಿದೆ, ಬದುಕುವ ಹಕ್ಕಿದೆ ಅದಕ್ಕೆ ಭಂಗ ಮಾಡದೆ. ಅವರಿಗೆ ಕಿರುಕುಳ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಗೃಹಮಂತ್ರಿಗಳನ್ನು ಕೈಮುಗಿದು ಮನವಿ ಮಾಡಿಕೊಂಡರು.