ಕೆಟರ್ ಹಾರ್ದಿಕ್ ಪಾಂಡ್ಯ, ನತಾಶಾ ಇಬ್ಬರೂ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ವಿಚ್ಛೇದನ ನಂತರ ಮೊದಲಬಾರಿ ಪಾಂಡ್ಯ ತಮ್ಮ ಮುದ್ದು ಮಗ ಅಗಸ್ತ್ಯನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಲ್ಕು ವರ್ಷಗಳು ಒಟ್ಟಾಗಿ ಇದ್ದ ಹಾರ್ದಿಕ್ ಪಾಂಡ್ಯ, ನತಾಶಾ ಮಗು ಮಾಡಿಕೊಂಡ ನಂತರ ಇವರು ಮದುವೆ ಆದರು. ಮಗನಿಗೆ ಅಗಸ್ತ್ಯ ಎಂದು ಹಾರ್ದಿಕ್ ಹೆಸರು ಇಟ್ಟಿದ್ದಾರೆ. ಈಗ ನತಾಶಾ ಹಾಗೂ ಹಾರ್ದಿಕ್ ದೂರ ಆಗಿದ್ದಾರೆ. ಈ ಜೋಡಿ ವಿಚ್ಛೇದನ ನಂತರ ಕೂಡಾ ಸ್ನೇಹಿತರಾಗಿ ಮುಂದುವರೆಯುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನದಲ್ಲಿ ಇತ್ತೀಚಿನ ಬದಲಾವಣೆಗಳ ಹೊರತಾಗಿಯೂ, ಹಾರ್ದಿಕ್ ಪಾಂಡ್ಯ ಅವರ ಮಗನ ಕುರಿತಾಗಿ ಹೆಚ್ಚಿನ ಪ್ರೀತಿ ಹೊಂದಿದ್ದಾರೆ. ಜುಲೈ 30ರಂದು ಅಗಸ್ತ್ಯ ಜನ್ಮದಿನ. ಮಗನಿಗೆ ಪ್ರೀತಿ ಸಂದೇಶ ಮತ್ತು ಹೃದಯಸ್ಪರ್ಶಿ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕವಾಗಿ ಮಗನ ಬರ್ತಡೆಗೆ ಶುಭಕೋರಿದ್ದಾರೆ. ಪೋಸ್ಟ್ನಲ್ಲಿ, ಹಾರ್ದಿಕ್ ಪಾಂಡ್ಯ ಅವರು ಮತ್ತು ಅವರ ಮಗನ ನಡುವಿನ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯುವ ವೀಡಿಯೋ ಹಂಚಿಕೊಂಡಿದ್ದಾರೆ.