ಬೆಂಗಳೂರು:- ಶಾಲೆಗಳಿಗೆ ಬಾಂಬ್ ಬೆದರಿಕೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬೆಂಗಳೂರು ನಗರ, ಗ್ರಾಮಾಂತರ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಹಿಂದೆ ಬಿಜೆಪಿ ಕೈವಾಡ ಇದೆ. ಬಿಜೆಪಿ ಯಾವಾಗ ಸೋಲುತ್ತದೆಯೋ ಅಥವಾ ಮುಂದೆ ಸೋಲಲಿದೆ ಎಂದು ಗೊತ್ತಾಗುತ್ತದೋ.
ಆಗ ಹೀಗೆಲ್ಲಾ ಆಗುತ್ತದೆ. ಬಿಜೆಪಿ ಸೋಲುತ್ತದೆ ಎಂದು ಗೊತ್ತಾದಾಗ ಏನಾದರೂ ಒಂದು ಆಗುತ್ತದೆ. ಗೋಧ್ರಾ ಹತ್ಯಾಕಾಂಡ, ಪುಲ್ವಾಮಾದಂತಹ ಘಟನೆಗಳು ನಡೆಯುತ್ತವೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವುದು ಸಹ ಇದರ ಭಾಗವೇ. ಜನರ ಗಮನ ಬೇರೆಡೆ ಸೆಳೆಯಲು ಇಂತಹ ತಂತ್ರ ಮಾಡುತ್ತಾರೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ 25 ಪ್ರಕರಣಗಳು ಇದ್ದವು. ಅದನ್ನು ವಾಪಸ್ ಪಡೆಯಲಾಗಿದೆ. ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡಲ್ಲ ಪ್ರಶ್ನಿಸಿದರು.