ರೌಡಿ ಶೀಟರ್ ಆಗಿರುವ ಪುನೀತ್ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿಯಿಂದ ಕೋಮು ಗಲಭೆ ನಡೆಸುವ ಫತ್ವಾ ಬಂದಿದೆ ಎಂದು ಸ್ವತಃ ತಾನೇ ಸೃಷ್ಟಿಸಿರುವ ‘ರಾಷ್ಟ್ರ ರಕ್ಷಣಾ ಪಡೆ’ ಎಂಬ ವಾಟ್ಸಪ್ ಗ್ರೂಪಿನಲ್ಲಿ ಹೇಳಿಕೊಂಡಿದ್ದಾನೆ. ಕೋಮು ಗಲಭೆ ನಡೆಸಿ 2024ಕ್ಕೆ ‘ವಿಶ್ವಗುರುವನ್ನ’ ಮತ್ತೆ ಪ್ರಧಾನಿಯಾಗಬೇಕೆಂದು ಈ ಭಯೋತ್ಪಾದಕರ ತಂಡ ಕೆಲಸ ಮಾಡಲಿದೆಯಂತೆ. ರಾಜ್ಯದಲ್ಲಿ ಎಲ್ಲಿ?ಯಾವಾಗ? ಹೇಗಾದರೂ ಭಯೋತ್ಪಾದಕ ಕೃತ್ಯಗಳನ್ನ ನಡೆಸಲು ಸಂಚು ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಸಮಾಜಘಾತುಕರಿಗೆ ಇಡಿ ಬಿಜೆಪಿಯೇ ಬೆಂಬಲಕ್ಕೆ ನಿಂತಿರುವುದು ಜಗಜ್ಜಾಹೀರು – ಬಿ.ಕೆ.ಹರಿಪ್ರಸಾದ್, ಪರಿಷತ್ ಸದಸ್ಯ
ಹರಿಪ್ರಸಾದ್ ತಮ್ಮ ಹೆಸರನ್ನ ತೆಗೆದುಕೊಂಡಿದ್ದಕ್ಕೆ, ಪುನೀತ್ ಕೆರೆಹಳ್ಳಿ ಪ್ರತಿಕ್ರಿಯಿಸಿದ್ದು, ಹರಿಪ್ರಸಾದ್ ರಿಲೀಸ್ ಮಾಡಿರೋ ಸ್ಕ್ರೀನ್ ಶಾಟ್ ನಕಲಿ, ಇದು ಹಿಂದೂ ಕಾರ್ಯಕರ್ತರನ್ನು ಭಯ ಪಡಿಸೋ ಕೆಲಸ ಅಂತಾ ವಾಗ್ದಾಳಿ ನಡೆಸಿದ್ದರು.ನಕಲಿ ಸ್ಕ್ರೀನ್ ಶಾಟ್ ನ್ನು ಸೃಷ್ಟಿ ಮಾಡಿದ್ದಾರೆ. ನೀವು ಯಾವ ಗ್ರೂಪ್ನಿಂದ ತೆಗೆದುಕೊಂಡಿದ್ದೀರಿ ಎಂದು ಹೇಳಬೇಕು. ಅದು ಎಲ್ಲಿ ಸಿಕ್ಕಿದೆ? ನನ್ನ ಹೆಸರಲ್ಲಿ ಯಾಕೆ ಸೃಷ್ಟಿ ಮಾಡಿದ್ದೀರಿ. ನೀವು ಯಾಕೆ ಫೇಕ್ನ್ಯೂಸ್ ಹರಡುತ್ತಿದ್ದೀರಿ? ನೀವು ರಾಜ್ಯದಲ್ಲಿ ಕೋಮು ದ್ವೇಷ ಸಾಧಿಸಲು ಹೊರಟಿದ್ದೀರಿ. ನಿನ್ನೆಯಿಂದ 30 ರಿಂದ 40ಕ್ಕೂ ಹೆಚ್ಚು ಮುಸಲ್ಮಾನರು ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.ಅನಾವಶ್ಯಕವಾಗಿ ತಮ್ಮ ಹೆಸರನ್ನು ಬಳಸಿದ್ದಕ್ಕೆ ಖಂಡಿಸಿ ಪುನೀತ್ ಕೆರೆಹಳ್ಳಿ ದೂರು ನೀಡಲು ಮುಂದಾದರು.