ಬೆಂಗಳೂರು:- ಬೆಂಗಳೂರಿನ ಉದ್ಯಮಿಗಳಿಗೆ ಕರವೆ ನಾರಾಯಣ ಗೌಡ ಬಣ ಎಚ್ಚರಿಕೆ ಕೊಟ್ಟಿದೆ. ಬೆಂಗಳೂರಿನಲ್ಲಿ ಅನ್ಯಭಾಷೆ ನಾಮ ಫಲಕ ಹೆಚ್ಚಾದ ಹಿನ್ನೆಲೆ ಹೋರಾಟಕ್ಕೆ ಕರವೇ ಮುಂದಾಗಿದೆ.
ಡಿಸೆಂಬರ್ 27ರೊಳಗೆ ಕನ್ನಡ ನಾಮಫಲಕ ಅಳವಡಿಸುವಂತೆ ಕರವೆ ಆಗ್ರಹಿಸಿದ್ದಾರೆ. ಕನ್ನಡ ನಾಮಪಲಕ ಅಳವಡಿಸದಿದ್ದಲ್ಲಿ ಬೃಹತ್ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 27ರಂದು ಬೆಂಗಳೂರಿನಾದ್ಯಂತ ಕರವೇ ಬೃಹತ್ ಹೋರಾಟ ನಡೆಸಲಿದೆ. ಕರವೇ ನಾರಾಯಣ ಗೌಡ ಬಣದಿಂದ ಎಲ್ಲಾ ಅಂಗಡಿ ,ಹೋಟೆಲ್ ,ಮಾಲ್ ಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.