ಮದುವೆಗೆ ಮುನ್ನವೇ ಹರ್ಷಿಕಾಗೆ ಸಿಕ್ತು ಸಖತ್ ಗಿಫ್ಟ್ ಸಿಕ್ಕಿದ್ದು, ಸರ್ ಪ್ರೈಸ್ ಆಗಿ ಚಿನ್ನದ ಉಡುಗೊರೆ ಪಡೆದಿದ್ದಾರೆ. ಹೌದು ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಒಟ್ಟಾಗಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಸಿಲೆಬ್ರಿಟಿಗಳ ಮನೆಗೆ ಹೋಗಿ ನೀಡುತ್ತಿದ್ದಾರೆ. ಈ ಜೋಡಿಗೆ ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆಯೊಂದು ದೊರೆತಿದೆ. ಹಿರಿಯ ನಟಿ ಜಯಮಾಲ (Jayamala) ಅವರು ಹರ್ಷಿಕಾಗೆ ಚಿನ್ನದ ಓಲೆ ಗಿಫ್ಟ್ (Gift) ನೀಡಿದ್ದಾರೆ.
ಭುವನ್–ಹರ್ಷಿಕಾಗೆ ವಿವಾಹಕ್ಕೂ ಮುನ್ನ ಚಿನ್ನದ ಉಡುಗೊರೆ ಕೊಟ್ಟು ಸರ್ ಪ್ರೈಸ್ ನೀಡಿದ್ದಾರೆ ಜಯಮಾಲ. ಜೊತೆಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ಸಂಭ್ರಮಿಸಿದ್ದಾರೆ. ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ನಟ ಭುವನ್ (Bhuvan) ಹಾಗೂ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಸಹವಾಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿಕೊಂಡು ಬಂದಿರುವ ಈ ಜೋಡಿ, ಇದೀಗ ತಮ್ಮ ಮದುವೆಗೆ ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ.