ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹರ್ಷಿಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಹರ್ಷಿಕಾ ತಮ್ಮ ತಮ್ಮ ಬೇಬಿ ಬಂಪ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇದನ್ನು ನಟಿಯೇ ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ.
ನನ್ನ ಬೇಬಿ ಬಂಪ್ ಈಗಲೇ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹರ್ಷಿಕಾ ಪೂಣಚ್ಚ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಶೇರ್ ಮಾಡಿದ್ದಾರೆ. ನಟಿ ತಮ್ಮ ಮೆಟರ್ನಿಟಿ ಫೋಟೋಶೂಟ್ನಿಂದ ಕೊನೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಇದು ನನ್ನ ಮೆಟರ್ನಿಟಿ ಶೂಟ್ನ ಕೊನೆಯ ಫೋಟೋಶೂಟ್ನ ಫೋಟೋಗಳು. ಡ್ಯೂ ಡೇಟ್ಗಿಂತ ಮೊದಲೇ ನನ್ನ ರಾಜಕುಮಾರಿ ಬಂದ ಕಾರಣ ನಾನು ಇದನ್ನು ಪೋಸ್ಟ್ ಮಾಡಲು ಸಾಧ್ಯವಾಗಲಿಲ್ಲ ಎಂದು ನಟಿ ಪೋಸ್ಟ್ನಲ್ಲಿ ಬರೆದುಕೊಂಡೆದ್ದಾರೆ.
ಮಗುವಿನ ಮುದ್ದಾಟ, ಹಾಲುಣಿಸುವುದು, ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ನನ್ನ ಪ್ರೆಗ್ನೆನ್ಸಿ ದಿನಗಳತ್ತ ಹಿಂದಿರುಗಿ ನೋಡಲು ಇಲ್ಲಿ ಈ ಫೋಟೋಗಳಿವೆ ಎಂದು ನಟಿ ಹಾರ್ಟ್ ಎಮೋಜಿಗಳ ಜೊತೆ ಬರೆದುಕೊಂಡಿದ್ದಾರೆ.
ನಾವು ಒಂದು ಡ್ರೀಮಿ ಥೀಮ್ ಪ್ಲಾನ್ ಮಾಡಿದ್ದೆವು. ನನ್ನ ಫೋಟೋಗ್ರಫರ್ಗೆ ಧನ್ಯವಾದಗಳು. ಇಷ್ಟು ಚಂದದ ಕಾನ್ಸೆಪ್ಟ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ. ಅವರು ಹೇಳಿದಂತೆ ಫೋಟೋಗಳು ಅಷ್ಟೇ ಮುದ್ದಾಗಿ ಬಂದಿವೆ.
ಸೆಪ್ಟೆಂಬರ್ 3ರಂದು ಬೆಳಗಿನ ಜಾವ 3ಗಂಟೆಗೆ ಹೆಣ್ಣು ಮಗುವಿಗೆ ಹರ್ಷಿಕಾ ಪೂಣಚ್ಚ ಜನ್ಮ ನೀಡಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಹರ್ಷಿಕಾ ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದರು.