ಗೃಹಿಣಿಯರಿಗೆ ಮಾಸಿಕ 2000 ರೂ.ಗಳನ್ನು ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಶೇ.ನೂರರಷ್ಟು ಯಶಸ್ವಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಐದು ಗ್ಯಾರಂಟಿಗಳಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಧನಸಹಾಯ ನೀಡುವ ಈ ಗೃಹಲಕ್ಷ್ಮಿ ಯೋಜನೆ ಈ ಐದು ಗ್ಯಾರಂಟಿಗಳಲ್ಲಿ ಇದೂ ಒಂದಾಗಿದೆ.
ಆಗಸ್ಟ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಈ ಯೋಜನೆಗೆ ಚಾಲನೆ ನೀಡಿದ್ದರು. ಜಾರಿಗೊಂಡ ನಂತರ ಶೇ.88ರಷ್ಟು ಗೃಹಿಣಿಯರು ಮೊದಲ ತಿಂಗಳ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ನಂತರದ ಕಂತು ತಲುಪಿಲ್ಲ ಎಂದು ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕುಗಳ ಗೃಹಿಣಿಯರು ಹೇಳಿಕೊಂಡಿದ್ದಾರೆ.
ಈಗಾಗಲೇ ಗೃಹಲಕ್ಷ್ಮೀ ಯೋಜನೆಯ 5 ಕಂತುಗಳನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ 6ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆಯನ್ನು ಆರಂಭಿಸಿದೆ.
5ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಅಂದ್ರೆ ಈ ಕೆಲಸ ಮಾಡಿ
- ಈಗಾಗಲೇ ಸರ್ಕಾರ ತಿಳಿಸಿರುವಂತೆ 5ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಾರದೇ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ( Check ) ಮಾಡಿ ಕೊಳ್ಳಬೇಕು.
- ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ( post office ) ಹೊಸ ಖಾತೆಯನ್ನು ಆರಂಭಿಸಿ. ಅದಕ್ಕೆ ಬೇಕಾದ ದಾಖಲೆಗಳನ್ನು ನೀಡಿದರೆ. ನಿಮ್ಮ ಬ್ಯಾಂಕ್ ಖಾತೆಗೆ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿಯ ಯೋಜನೆಯ ಎಲ್ಲಾ ಕಂತಿನ ಹಣವು ಜಮಾ ಆಗುತ್ತದೆ.
ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಕು :
ಹಾಗೆಯೇ ಇನ್ನೊಂದು ಮುಖ್ಯ ವಿಚಾರ ಎಂದರೆ, ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಮಾಹಿತಿ ಕಣಜ ವೆಬ್ಸೈಟ್ ಮೂಲಕ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ತಿಳಿದುಕೊಳ್ಳಬಹುದು. ಅಥವಾ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ DBT Karnataka mobile ಅಪ್ಲಿಕೇಶನ್ ( Application ) ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಇಲ್ವೋ ಅಂತ ಚೆಕ್ ಮಾಡಿಕೊಳ್ಳಬಹುದು. ಇದೊಂದು ಉತ್ತಮ ವಿಚಾರವಾಗಿದೆ.
6ನೇ ಕಂತಿನ ಹಣ ಜಮಾ ಆಗುವ ದಿನಾಂಕ
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣವನ್ನು ಬಹಳಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಹಾಗೆಯೇ ಇನ್ನು ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕು. ಹಾಗೆಯೇ 6ನೇ ಕಂತಿನ ಹಣ ಬಿಡುಗಡೆ ಫೆಬ್ರವರಿ ತಿಂಗಳಿನ 2ನೇ ವಾರದಲ್ಲಿ ಆಗಬಹುದು ಎಂಬ ಮಾಹಿತಿ ತಿಳಿದು ಬಂದಿದೆ.
ಈ ನೂನ್ಯತೆಗಳನ್ನು ಸರಿಪಡಿಸಲು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮನೆ ಮನೆಗೆ ತೆರಳಿ ಸರಿಪಡಿಸುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ಬಹತೇಕ ಕುಟುಂಬಗಳೂ ತಮ್ಮ ಖರ್ಚು ವೆಚ್ಚಗಳಿಗೆ ಈ ಹಣವನ್ನೇ ನೆಚ್ಚಿಕೊಂಡಿದ್ದಾರೆ. ದೀಪಾವಳಿಯ ಹೊತ್ತಿಗೆ ಬಾಕಿ ಸೇರಿದಂತೆ ಈ ತಿಂಗಳ ಹಣವನ್ನೂ ಬಿಡುಗಡೆ ಮಾಡಿದರೆ ಸಹಾಯವಾಗುತ್ತದೆ ಎಂದು ಗೃಹಿಣಿಯರು ಹೇಳುತ್ತಾರೆ.