ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡಬೇಕು? ಈ ವಿಚಾರ ಕಳೆದ 2 ತಿಂಗಳಿಂದ ಗೊಂದಲದ ಗೂಡಾಗಿದೆ. ಭವಾನಿ ಅವರಿಗೇ ಟಿಕೆಟ್ ಕೊಡಿ ಅಂತಾ ರೇವಣ್ಣ ಪಟ್ಟು ಹಿಡಿದಿದ್ದರೆ, ಕುಮಾರಸ್ವಾಮಿ ಮಾತ್ರ ಸ್ವರೂಪ್ ಅವರಿಗೇ ಟಿಕೆಟ್ ಸಿಗಬೇಕು ಅಂತಾ ಹೇಳ್ತಿದ್ದಾರೆ. ಅಂತಿಮವಾಗಿ ಈ ವಿಚಾರ ದೇವೇಗೌಡರ ಅಂಗಳ ತಲುಪಿದೆ. ಆದ್ರೆ, ದೇವೇಗೌಡರೇ ಮಧ್ಯ ಪ್ರವೇಶ ಮಾಡಿದ್ರೂ ಈ ವಿವಾದ ಬಗೆಹರಿದಿಲ್ಲ! ಅಂತಾದ್ದೇನಾಯ್ತು? ಈ ಗೊಂದಲ ಬಗೆಹರಿಯೋದಾದ್ರೂ ಹೇಗೆ?
ಭವಾನಿಗೆ ಸಿಗದ ಟಿಕೆಟ್ ಸ್ವರೂಪ್ಗೂ ಸಿಗಲ್ಲ?
ಏಪ್ರಿಲ್ 2 ಭಾನುವಾರ ರಾತ್ರಿ ದೇವೇಗೌಡರ ಮನೆಯಲ್ಲಿ ಕಾವೇರಿದ ಚರ್ಚೆ.. ವಾದ – ಪ್ರತಿವಾದ. ಇವೆಲ್ಲ ನಡೆದದ್ದು, ಕೇವಲ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರವಾಗಿ.. ಭವಾನಿ ಅವರಿಗೇ ಹಾಸನ ಕ್ಷೇತ್ರದ ಟಿಕೆಟ್ ಕೊಡಬೇಕು ಅನ್ನೋದು ರೇವಣ್ಣ ಆಗ್ರಹ. ಆದ್ರೆ, ಪಕ್ಷಕ್ಕಾಗಿ ದುಡಿದಿರುವ ಸ್ವರೂಪ್ ಪ್ರಕಾಶ್ಗೆ ಟಿಕೆಟ್ ಸಿಗಬೇಕು ಅನ್ನೋದು ಕುಮಾರಸ್ವಾಮಿ ನಿಲುವು.. ಅಂತಿಮವಾಗಿ ದೇವೇಗೌಡರೂ ಕೂಡಾ ಸ್ವರೂಪ್ ಪರ ವಾಲುತ್ತಿದ್ದಂತೆಯೇ ರೇವಣ್ಣ ಹೊಸ ಅಸ್ತ್ರ ಪ್ರಯೋಗ ಮಾಡಿದರು. ಒಂದು ವೇಳೆ ಭವಾನಿ ಅವರಿಗೆ ಟಿಕೆಟ್ ಕೊಡಲ್ಲ ಅನ್ನೋದಾದ್ರೆ, ಸ್ವರೂಪ್ಗೂ ಟಿಕೆಟ್ ಕೊಡಬೇಡಿ ಅನ್ನೋದು ರೇವಣ್ಣ ನಿಲುವು. ನಮಗೆ ಸಿಗದ ಟಿಕೆಟ್ ಅವರಿಗೂ ಸಿಗಬಾರದು ಅನ್ನೋದು ರೇವಣ್ಣ ನಿಲುವು.. ಮೂರನೇ ಅಭ್ಯರ್ಥಿಯನ್ನ ಹುಡುಕಿ ಅವರಿಗೆ ಟಿಕೆಟ್ ಕೊಡಿ ಅಂತಾ ಹೊಸ ಅಸ್ತ್ರವನ್ನ ಪ್ರಯೋಗಿಸಿದ್ದಾರೆ ರೇವಣ್ಣ.. ಈ ಮೂಲಕ ನಾನು ಸೋಲಬೇಕು ಅಂತಾದ್ರೆ ಕುಮಾರಸ್ವಾಮಿಯೂ ಸೋಲಬೇಕು ಅನ್ನೋದು ರೇವಣ್ಣ ತಂತ್ರಗಾರಿಕೆ..
ಭವಾನಿ ರೇವಣ್ಣಗೆ ಟಿಕೆಟ್ ಕೊಡಲು ಕುಮಾರಸ್ವಾಮಿ ವಿರೋಧವೇಕೆ?
ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಬಾರದು ಅನ್ನೋದಕ್ಕೆ ಕುಮಾರಸ್ವಾಮಿ ಅವರ ಬಳಿ ಹಲವು ಕಾರಣಗಳಿವೆ. ಮೊದಲನೆಯದು ಕುಟುಂಬ ರಾಜಕಾರಣ.. ಈಗಾಗಲೇ ದೇವೇಗೌಡರ ಕುಟುಂಬದ ಹಲವರು ಶಾಸಕರು, ಸಂಸದರಾಗಿದ್ದಾರೆ. ಇದೀಗ ಗೌಡರ ಫ್ಯಾಮಿಲಿಯ ಮತ್ತೊಬ್ಬ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಫ್ಯಾಮಿಲಿ ಪಾಲಿಟಿಕ್ಸ್ ಮತ್ತಷ್ಟು ವಿಸ್ತಾರವಾಗಲಿದೆ. ಈಗಾಗಲೇ ಜೆಡಿಎಸ್ನ ಕುಟುಂಬ ರಾಜಕಾರಣವನ್ನ ವಿರೋಧ ಮಾಡ್ತಿರುವ ರಾಜಕೀಯ ವಿರೋಧಿಗಳಿಗೆ ಮತ್ತಷ್ಟು ಅಸ್ತ್ರ ಸಿಕ್ಕಂತಾಗುತ್ತೆ. ಜೊತೆಗೆ ಭವಾನಿ ಅವರಿಗೆ ಟಿಕೆಟ್ ಕೊಟ್ಟರೆ ಹಾಸನ ಕ್ಷೇತ್ರದಲ್ಲಿ ಮತ್ತೊಂದು ಪವರ್ ಸೆಂಟರ್ ಸೃಷ್ಟಿಯಾಗಬಹುದು ಅನ್ನೋದು ಕುಮಾರಸ್ವಾಮಿ ನಿಲುವು. ಇದಲ್ಲದೆ ಸ್ವರೂಪ್ ಪ್ರಕಾಶ್ ಜೆಡಿಎಸ್ನ ಕಟ್ಟಾಳು. ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ತಂದೆ ಕೂಡಾ ಶಾಸಕರಾಗಿದ್ದವರು. ಹೀಗಾಗಿ, ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯ ಸಂದೇಶ ರವಾನೆ ಮಾಡಿದಂತೆ ಆಗುತ್ತೆ ಅನ್ನೋದು ಕುಮಾರಸ್ವಾಮಿ ನಿಲುವು.. ಆದ್ರೆ ಈ ವಿಚಾರವಾಗಿ ದೇವೇಗೌಡರೇ ಅಂತಿಮ ನಿರ್ಧಾರ ಕೈಗೊಳ್ತಾರೆ ಅಂತಾರೆ ಕುಮಾರಸ್ವಾಮಿ..
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ? ಎಚ್ಡಿಕೆಗೆ ಇಷ್ಟವೇ ಇಲ್ಲ!
ಭವಾನಿ ಅವರಿಗೆ ಟಿಕೆಟ್ ಕೊಡಲ್ಲ ಅಂದ್ರೆ, ಸ್ವರೂಪ್ಗೂ ಕೊಡಬೇಡಿ.. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಿ ಅನ್ನೋದು ರೇವಣ್ಣ ವಾದ. ಈ ಹಿಂದೆ ಕೂಡಾ ಇದೇ ಮಾತುಗಳು ಕೇಳಿ ಬಂದಿದ್ದವು. ಎಚ್. ಡಿ. ದೇವೇಗೌಡರ ನಿರ್ಧಾರ ಏನು? ಅವರ ಅಚ್ಚರಿಯ ಆಯ್ಕೆ ರಾಜೇಗೌಡ ಆಗಬಹುದಾ ಅನ್ನೋ ಮಾತುಗಳೂ ಕೇಳಿ ಬಂದಿದ್ವು. ಇದಕ್ಕೆ ಪೂರಕ ಎಂಬಂತೆ ರೇವಣ್ಣ ಅವರೂ ಕೂಡಾ ರಾಜೇಗೌಡರ ಜೊತೆ ಮಾತುಕತೆ ನಡೆಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ಎಂ. ರಾಜೇಗೌಡರಿಗೆ ಹಾಸನದಲ್ಲಿ ಪ್ರಚಾರ ಮಾಡಿ ಅಂತಾ ರೇವಣ್ಣ ಆದೇಶ ಕೊಟ್ಟಿದ್ದರು. ಆದ್ರೆ, ಸ್ವರೂಪ್ ಬಿಟ್ಟು ಬೇರೊಬ್ಬರಿಗೆ ಟಿಕೆಟ್ ಕೊಡೋದು ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲ. ಹೀಗಾಗಿ, ಇನ್ನೂ ಕೂಡಾ ಹಾಸನ ಟಿಕೆಟ್ ಗೊಂದಲ ಬಗೆಹರಿಯುತ್ತಲೇ ಇಲ್ಲ. ಜೆಡಿಎಸ್ನ ಎರಡನೇ ಪಟ್ಟಿಯಲ್ಲೂ ಹಾಸನ ಕ್ಷೇತ್ರದ ಅಭ್ಯರ್ಥಿ ಯಾರು ಅಂತಾ ಘೋಷಣೆ ಮಾಡೋದು ಡೌಟ್ ಅಂತಾನೇ ಹೇಳಲಾಗ್ತಿದೆ.
ಬಿಜೆಪಿಗೆ ವರವಾಯ್ತು ಜೆಡಿಎಸ್ ಗೊಂದಲ!

ಹಾಸನದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಶಾಸಕ ಪ್ರೀತಂ ಗೌಡ ಅವರಿಗೆ ತಕ್ಕ ಪೈಪೋಟಿ ಕೊಡಬೇಕಿದ್ದ ಜೆಡಿಎಸ್, ಇನ್ನೂ ಕೂಡಾ ಟಿಕೆಟ್ ಗುದ್ದಾಟದಲ್ಲೇ ಬ್ಯುಸಿಯಾಗಿದೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್. ಎಸ್. ಪ್ರಕಾಶ್ ಅವರು ಈಗಿಲ್ಲ. ಒಂದು ವೇಳೆ ಪ್ರಕಾಶ್ ಅವರ ಪುತ್ರ ಸ್ವರೂಪ್ಗೆ ಟಿಕೆಟ್ ಸಿಕ್ಕರೆ ಜೆಡಿಎಸ್ಗೆ ಅನುಕಂಪದ ಮತಗಳಾದರೂ ಸಿಗಬಹುದು ಅನ್ನೋ ಲೆಕ್ಕಾಚಾರವೂ ಇದೆ. ಅಂತಿಮವಾಗಿ ಮತದಾರನ ಮನದಾಳದಲ್ಲಿ ಏನಿದೆ ಅನ್ನೋದೇ ಅತಿ ಮುಖ್ಯ..