ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಕೂಡಲೇ ಬಂದು ತನಿಖೆಗೆ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಸಂಶಯಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ತಮ್ಮ ಕುಟುಂಬಕ್ಕೂ ಮುಜುಗರ ಎಂಬುದನ್ನು ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದರು.
ತನಿಖೆ ನಡೆಸುವ ಕಾನೂನು ರಾಜ್ಯ ಸರಕಾರಕ್ಕಿದೆ. ಆದರೆ ವಿದೇಶದಿಂದ ಕರೆತರಲು, ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿ ಮತ್ತಿತರ ಅಂಶಗಳ ಕುರಿತು ಕೇಂದ್ರ ಸಹಕಾರ ನೀಡಲು ಬದ್ಧವಾಗಿದೆ. ಈ ಕುರಿತು ಡಿಐಜಿ ಅವರಿಗೆ ಹೇಳಿದ್ದೇನೆ ಎಂದರು. ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ನಿಜವಾಗಿಯೂ ಬದ್ದತೆ ಇದ್ದರೆ ಪ್ರಜ್ವಲ್, ಪೆನ್ಡ್ರೈವ್ ಪ್ರಕರಣವನ್ನು ಹೈಕೋರ್ಟ್ನ ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಿ ಪಾರದರ್ಶಕತೆ ಕಾಪಾಡಿಕೊಳ್ಳಲಿ ಎಂದು ಆಗ್ರಹಿಸಿದರು.