ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಆ್ಯಪ್ ಆಟೋ ಬುಕ್ ಮಾಡ್ತಿದ್ದೀರಾ..!? ಹಾಗಿದ್ರೆ ನೀವು ಈ ಸ್ಟೋರಿ ನೋಡಲೇಬೇಕು.
ಹೌದು ಆ್ಯಪ್ ಆಟೋ ಬುಕ್ ಮಾಡೋ ಮುನ್ನ ಸ್ವಲ್ಪ ಎಚ್ಚರದಿಂದ ಇದ್ದರೆ ಒಳಿತು. ಇಲ್ಲವಾದರೆ ಕೋಟಿ ಕೋಟಿ ದುಡ್ಡು ಕಟ್ಟಬೇಕಾದಿತು ಹುಷಾರ್. ಊಬರ್ ಆಟೋ ಬುಕ್ ಮಾಡಿದ ಪ್ರಯಾಣಿಕನಿಗೆ ಊಬರ್ ಆ್ಯಪ್ ಒಂದು ಕೋಟಿ ಬಿಲ್ ಕಳಿಸಿದ್ದಾರೆ.
ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಆಂದ್ರಪ್ರದೇಶದ ವ್ಯಕ್ತಿಯೊಬ್ಬ ಆಟೋ ಬುಕ್ ಮಾಡಿದ್ದ. ಪ್ರಯಾಣದ ಬಳಿಕ ಊಬರ್ ಆ್ಯಪ್ ಬರೊಬ್ಬರಿ ಒಂದು ಕೋಟಿ ಬಿಲ್ ತೋರಿಸಿದೆ.
₹1,03,11,055 ಆಟೋ ಚಾರ್ಜ್ ನೋಡುತ್ತಿದ್ದಂತೆ ಪ್ರಯಾಣಿಕ ಶಾಕ್ ಗೆ ಒಳಗಾಗಿದ್ದಾನೆ. 207 ರೂ ಆಗ್ತಿದ್ದ ಜಾಗದಲ್ಲಿ ಕೋಟಿ ಕೋಟಿ ನೋಡ್ತಿದ್ದಂತೆ ಬೆಚ್ಚಿಬಿದ್ದ ಪ್ರಯಾಣಿಕ, ಬಿಲ್ ತೋರಿಸುತ್ತಿದ್ದ ಊಬರ್ ಆ್ಯಪ್ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇಂತಹ ಆ್ಯಪ್ ಆಧಾರಿತ ಆಟೋಗಳನ್ನ ಬಳಕೆ ಮಾಡದಂತೆ ಮನವಿ ಮಾಡಿದ್ದು, ಅಲ್ಲದೇ ಕೂಡಲೇ ಇಂತಹ ಆ್ಯಪ್ ಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.