ಉದ್ಯೋಗ ಮಾರುಕಟ್ಟೆಯಲ್ಲಿ ಕಾಮರ್ಸ್ ಬಹುಬೇಡಿಕೆಯ ವಿಷಯ. ನೀವು ಪಿಯುಸಿಯಲ್ಲಿ ವಾಣಿಜ್ಯ ವಿಷಯವನ್ನು ಓದಿದ್ದರೆ ಹಲವು ವೃತ್ತಿಪರ ಕೋರ್ಸ್ಗಳನ್ನು ಮಾಡಬಹುದು. ಈ ಹಿಂದಿನ ಸಂಚಿಕೆಯಲ್ಲಿ ವಿವರಿಸಲಾದ ಕಲಾ ಪದವಿಗೆ ಲಭ್ಯವಿರುವ ಪದವಿ ಅಥವಾ ವೃತ್ತಿಪರ ಕೋರ್ಸ್ಗಳನ್ನೂ ಪಿಯುಸಿಯಲ್ಲಿ ವಾಣಿಜ್ಯ ವಿಷಯಗಳನ್ನು ಓದಿರುವವರು ಮಾಡಬಹುದು. ಕೆಲವು ಆಯ್ಕೆಗಳು ಈ ಮುಂದಿನಂತೆ ಇವೆ.
ಈ ಕೆಳಗೆ ಪಿಯುಸಿ ನಂತರ ವಾಣಿಜ್ಯಕ್ಕೆ ಸಂಬಂಧಪಟ್ಟ ಯಾವ ಕೋರ್ಸ್ ಮಾಡಿದರೆ ಹೆಚ್ಚು ಸಂಬಳ ಸಿಗಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳನ್ನು ನೋಡಬಹುದು. ವಾಣಿಜ್ಯ ವಿಷಯವನ್ನು ನೀವು ಆಯ್ಕೆ ಮಾಡಿದರೆ ಮುಂದೆ ನಿಮಗೆ ಸಿಎ, ಸಿಎಸ್ ನಂತಹ ವೃತ್ತಿಪರ ಕೋರ್ಸ್ ಕೂಡ ಮಾಡುವ ಅವಕಾಶ ಇರುತ್ತದೆ.
ಪಿಯುಸಿ ವಾಣಿಜ್ಯದ ನಂತರ ಸರಿಯಾದ ಕೋರ್ಸ್ ಅನ್ನು ಹೇಗೆ ಆಯ್ಕೆ ಮಾಡುವುದು?
ವಾಣಿಜ್ಯ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು, ಪಿಯುಸಿ ವಾಣಿಜ್ಯದ ನಂತರ ಆಯ್ಕೆ ಮಾಡಲು ಲಭ್ಯವಿರುವ ವಿವಿಧ ಕೋರ್ಸ್ಗಳ ಬಗ್ಗೆ ನೀವು ತಿಳಿದಿರಬೇಕು. 2024 ರಲ್ಲಿ ವಿದ್ಯಾರ್ಥಿಗಳಿಗೆ ಬಹಳಶ್ಟಿ ಆಯ್ಕೆ ಮತ್ತು ಅವಕಾಶಗಳು ಲಭ್ಯವಿವೆ. ಅಗತ್ಯವಿರುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದರಿಂದ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಹಾಯ ಮಾಡುತ್ತದೆ.
- ಸಂಬಂಧಿತ ಕೋರ್ಸ್ ಅನ್ನು ಹುಡುಕಲು ನಿಮ್ಮ ಆಸಕ್ತಿಯನ್ನು ಗುರುತಿಸಿ.
- ಪಠ್ಯಕ್ರಮ ಮತ್ತು ವಿಷಯಗಳನ್ನು ಪರಿಶೀಲಿಸಿ.
- ವಾಣಿಜ್ಯ, ಅರ್ಹತೆ, ಕೋರ್ಸ್ ಅವಧಿ ಮತ್ತು ಶುಲ್ಕಕ್ಕಾಗಿ ಉತ್ತಮ ಕೋರ್ಸ್ ಅನ್ನು ಪರಿಶೀಲಿಸಿ.
ಪಿಯುಸಿ ವಾಣಿಜ್ಯದ ನಂತರದ ಟಾಪ್ 20 ಕೋರ್ಸ್ಗಳ ಪಟ್ಟಿ ಇಲ್ಲಿದೆ
- ಬ್ಯಾಚುಲರ್ ಆಫ್ ಕಾಮರ್ಸ್ (B.Com)
- ಬ್ಯಾಚುಲರ್ ಆಫ್ ಎಕನಾಮಿಕ್ಸ್ (BE)
- ಬ್ಯಾಚುಲರ್ ಆಫ್ ಅಕೌಂಟಿಂಗ್ ಅಂಡ್ ಫೈನಾನ್ಸ್
- ಬ್ಯಾಚುಲರ್ ಆಫ್ ಕಾಮರ್ಸ್ ಇನ್ ಬ್ಯಾಂಕಿಂಗ್ ಅಂಡ್ ಇನ್ಶೂರೆನ್ಸ್ (BBI)
- ಬ್ಯಾಚುಲರ್ ಆಫ್ ಕಾಮರ್ಸ್ ಇನ್ ಫೈನಾನ್ಸಿಯಲ್ ಮಾರ್ಕೆಟ್ (BFM)
- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA)
- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ – ಇಂಟರ್ನ್ಯಾಷನಲ್ ಬಿಸಿನೆಸ್
- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ – ಕಂಪ್ಯೂಟರ್ ಅಪ್ಲಿಕೇಶನ್ (BBA-CA)
- ಇಂಡಸ್ಟ್ರಿ ಓರಿಎಂಟೆಡ್ ಇಂಟಿಗ್ರೇಟೆಡ್ ಕೋರ್ಸಿಸ್
- ಚಾರ್ಟರ್ಡ್ ಅಕೌಂಟೆನ್ಸಿ
- ಕಂಪನಿ ಸೆಕ್ರೆಟರಿ (CS)
- ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್
- ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಷನ್
- ಬಿಕಾಂ
- ಬಿಕಾಂ ಮಾರ್ಕೆಟಿಂಗ್
- ಬಿಕಾಂ ಟೂರಿಸಂ ಅಂಡ್ ಟ್ರಾವೆಲ್ ಮ್ಯಾನೇಜ್ಮೆಂಟ್
- ಬಿಎ ಇನ್ ಹುಮಾನಿಟೀಸ್ ಅಂಡ್ ಸೋಶಿಯಲ್ ಸೈನ್ಸ್
- ಬಿಎ ಎಲ್ ಎಲ್ ಬಿ
- ಬಿಡೆಸ್ ಇನ್ ಡಿಸೈನ್
- ಡಿಪ್ಲೋಮ ಇನ್ ಎಜುಕೇಶನ್ (DEd)
- ವಾಣಿಜ್ಯ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ವ್ಯವಸ್ಥಾಪಕ ಕೌಶಲ್ಯಗಳನ್ನು ನೀಡಲು ವಾಣಿಜ್ಯ, ಅರ್ಥಶಾಸ್ತ್ರ, ವ್ಯಾಪಾರ ಕಾನೂನು, ಲೆಕ್ಕಪತ್ರ ನಿರ್ವಹಣೆ, ತೆರಿಗೆ ಮತ್ತು ಹಣಕಾಸು ವಿಷಯಗಳ ಮೇಲೆ ಕೇಂದ್ರೀ ಕರಿಸುತ್ತದೆ. ಬಿಕಾಮ್ ಆಕಾಂಕ್ಷಿಗಳು ಸಾಮಾನ್ಯ ವ್ಯವಹಾರ ತತ್ವಗಳ ಬಗ್ಗೆ ಕಲಿಯುತ್ತಾರೆ. ಬಿಕಾಂ ಕೋರ್ಸ್ಗಳಿಗೆ ಅರ್ಹತೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 50% ಅಂಕಗಳು. ಬಿಕಾಂ ಕೋರ್ಸ್ ವಾಣಿಜ್ಯ ವಿದ್ಯಾರ್ಥಿಗಳ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಕೋರ್ಸ್ ಆಗಿದೆ. ಬಿಕಾಂ ಪಠ್ಯಕ್ರಮವು ತೆರಿಗೆ, ಅರ್ಥಶಾಸ್ತ್ರ,