ದೇಶ ವಿದೇಶಗಳಲ್ಲೂ ಕಾಫಿ ಅಚ್ಚುಮೆಚ್ಚಿನ ಪಾನೀಯ. ಡಿಕಾಶನ್ ಕಾಫಿ ರುಚಿ ಕುಡಿಯುತ್ತಿದ್ದರೆ ಮತ್ತಷ್ಟು ಕುಡಿಯಬೇಕು ಎನಿಸುತ್ತದೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಕಾಫಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಿಂಗಾಪುರದ ಕಂಟೆಂಟ್ ಕ್ರಿಯೇಟರ್ ಆಗಿರುವ ಕಾಲ್ವಿನ್ ಲೀ ಎಂಬುವವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಲಕ್ಷಣ ಕಾಫಿಯನ್ನು ಕುಡಿದಿದ್ದಾರೆ. ಸಿಪ್ ತೆಗೆದುಕೊಂಡ ಕ್ಷಣ, ರುಚಿ ಅಹಿತಕರವಾಗಿರುತ್ತದೆ ಎಂದು ಅವರ ಪ್ರತಿಕ್ರಿಯೆಯಿಂದ ಸ್ಪಷ್ಟವಾಗುತ್ತದೆ. ಕಾಲ್ವಿನ್ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವನ್ನು “ಐ ಲವ್ ಆನಿಯನ್, ಬಟ್ ನಾಟ್ ವಿತ್ ಕಾಫಿ” ನನಗೆ ಈರುಳ್ಳಿ ಎಂದರೆ ತುಂಬಾ ಇಷ್ಟ. ಆದರೆ ಕಾಫಿ ಜೊತೆ ಅಲ್ಲ ಎಂದು ಶೀರ್ಷಿಕೆ ಬರೆದು ಹಂಚಿಕೊಂಡಿದ್ದಾರೆ.
ಐದು ದಿನಗಳ ಹಿಂದೆಯಷ್ಟೇ ಹಂಚಿಕೊಂಡಿರುವ ಈ ವಿಡಿಯೋವನ್ನು ಸುಮಾರು 3 ಲಕ್ಷ 70 ಸಾವಿರ ಮಂದಿ ವೀಕ್ಷಿಸಿದ್ದಾರೆ. ಇದಕ್ಕೆ ನೆಟ್ಟಿಗರು ಚಿತ್ರ-ವಿಚಿತ್ರವಾಗಿ ಕಾಮೆಂಟ್ ಮಾಡುವ ಮೂಲಕ ಕೋಲಾಹಲವೇ ಹುಟ್ಟಿದೆ.
ಕೆಲ ಬಳಕೆದಾರರು, ಈರುಳ್ಳಿಯನ್ನು ಕೆಟ್ಟ ಕಲ್ಪನೆಯಲ್ಲಿ ನೋಡಿದ್ದು ಇದರಲ್ಲೇ ಎಂದು ಬರೆದುಕೊಂಡಿದ್ದಾರೆ