ಬೆಂಗಳೂರು:– ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಅಥವಾ ವಾಟ್ಸ್ಆ್ಯಪ್ ಪಿಂಕ್ ಅನ್ನು ಇನ್ಸ್ಟಾಲ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿರುವ ಕರ್ನಾಟಕ ಪೊಲೀಸ್, ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ ಎಂದು ಉಲ್ಲೇಖಿಸಿದೆ.
ನೀವು ಒಂದು ವೇಳೆ ವಾಟ್ಸ್ಆ್ಯಪ್ ಪಿಂಕ್ ಇನ್ಸ್ಟಾಲ್ ಮಾಡಿದ್ದೇ ಆದಲ್ಲಿ ಹ್ಯಾಕರ್ಗಳು ನಿಮ್ಮ ಫೋಟೊ, ಕಾಂಟ್ಯಕ್ಟ್, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ಗಳು, ಎಸ್ಎಂಎಸ್ಗಳನ್ನು ಹ್ಯಾಕ್ ಮಾಡಲಿದ್ದಾರೆ ಎಂದು ಕರ್ನಾಟಕ ಪೊಲೀಸ್ ಎಚ್ಚರಿಕೆ ನೀಡಿದೆ.
ವಂಚಕರು ನಿಮ್ಮ ಮೊಬೈಲ್ನ ಸಂಪೂರ್ಣ ದತ್ತಾಂಶಕ್ಕೆ ಕನ್ನ ಹಾಕುವ ಸಾಧ್ಯತೆ ಇದೆ. ಹೀಗಾಗಿ ಯಾರೂ ಕೂಡ ವಾಟ್ಸ್ಆ್ಯಪ್ ಪಿಂಕ್ ಬಳಸಬೇಡಿ. ಒಂದು ವೇಳೆ ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾದರೆ 1930 ಗೆ ಕರೆ ಮಾಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.