ಬಹುಭಾಷಾ ನಟಿ ಅಮಲಾ ಪೌಲ್ ಆರು ತಿಂಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಇದೀಗ ನಟಿ ಪತಿ ಹಾಗೂ ಮಗುವಿನೊಂದಿಗೆ ಬಾಲಿಗೆ ತೆರಳಿದ್ದು ಅಲ್ಲಿನ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಅಮಲಾ ಪೌಲ್ ಅವರು ಪತಿ ಜಗತ್ ದೇಸಾಯಿ ಜೊತೆಗೆ ಇಂಡೋನೇಷ್ಯಾದ ಪೊಟಾಟೋ ಹೆಡ್ ಬೀಚ್ ಕ್ಲಬ್ನಲ್ಲಿ ಎಂಜಾಯ್ ಮಾಡಿದ್ದಾರೆ. ಪತಿ ಹಾಗೂ ಮಗುವಿನ ಜೊತೆ ನಟಿ ಮುದ್ದಾಗಿ ಪೋಸ್ ಕೊಟ್ಟಿದ್ದು ಅವರ ಫೋಟೋಗಳು ವೈರಲ್ ಆಗಿವೆ.
ಟ್ರಾಪಿಕಲ್ ಲೈಫ್ ಬಾಲಿ ಎಂದು ನಟಿ ಫೋಟೋ ಜೊತೆಗೆ ಬರೆದುಕೊಂಡಿದ್ದಾರೆ. ಇದಲ್ಲದೆ ಐಲ್ಯಾಂಡ್ ಡೈರೀಸ್ ಎಂದು ನಟಿ ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಇದರಲ್ಲಿ ಇವರ ಫ್ಯಾಮಿಲಿ ಪಿಕ್ ಪಿಕ್ಚರ್ ಪರ್ಫೆಕ್ಟ್ ಆಗಿ ಸೆರೆಯಾಗಿದೆ.
ಅಮಲಾ ಪೌಲ್ ಮತ್ತೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡನೆ ಮದುವೆಯಾಗಿರುವ ಅಮಲಾ ತಾಯಿಯಾಗಿರು ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ, ಆಗಾಗ ಫೋಟೋ ಹಾಗೂ ವಿಡಿಯೋ ಶೇರ್ ಮಾಡ್ತಾ ಕ್ರೇಜ್ ಕ್ರಿಯೇಟ್ ಮಾಡ್ತಾರೆ. ಇದೀಗ ನಟಿ ಶೇರ್ ಮಾಡಿದ ಫೋಟೋಗೆ ಬ್ಯಾಡ್ ಕಮೆಂಟ್ ಗಳು ಬರ್ತಿವೆ.ಆದರೆ ಅದಕ್ಕೆಲ್ಲಾ ನಟಿ ಕ್ಯಾರೆ ಎನ್ನುತ್ತಿಲ್ಲ.
ನಟಿ ಅಮಲಾ ಪೌಲ್ ಉದ್ಯಮಿ ಜಗತ್ ದೇಸಾಯಿ ಜೊತೆ 2ನೇ ಮದುವೆ ಆಗಿದ್ದಾರೆ. ಮದುವೆಯಾಗಿ ಮಗುವಾದ ಮೇಲೆ ನಟಿ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಮದುವೆಗೂ ಮುನ್ನ ಪತಿಗೆ ಚುಂಬಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ರು. ಇದೀಗ ನಟಿ ಮತ್ತಷ್ಟು ಹಾಟ್ ಆಗಿ ಫೋಟೋ ಹಂಚಿಕೊಂಡಿದ್ದಾರೆ.
ಓಣಂ ಹಬ್ಬದ ದಿನ ಸಾಂಪ್ರದಾಯಿಕ ಉಡುಗೆಯಲ್ಲಿ ಪತಿ ಮತ್ತು ಮಗನ ಜೊತೆ ಫೋಟೋಗೆ ಪೋಸ್ ಕೊಟ್ಟ ಅಮಲಾಪಾಲ್ ಇದೀಗ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ನಟಿ ತೊಟ್ಟ ಬಟ್ಟೆ ಬಗ್ಗೆ ನಾನಾ ಕಮೆಂಟ್ ಗಳನ್ನು ಮಾಡ್ತಿದ್ದಾರೆ.
ಮದುವೆಯಾಗಿ ಮಗುವಾದ ಮೇಲೆ ಅಮಲಾ ಪೌಲ್ ಸಿಕ್ಕಾಪಟ್ಟೆ ದಪ್ಪ ಆಗಿದ್ದಾರೆ ಎಂದು ಕೆಲವರು ಕಮೆಂಟ್ ಮಾಡ್ತಿದ್ದಾರೆ. ಇದೀಗ ಪತಿಯೊಂದಿಗೆ ಬಾಲಿಗೆ ವೆಕೇಷನ್ಗೆ ತೆರಳಿದ ಅಮಲಾ ಪೌಲ್, ಪ್ರಕೃತಿಯ ಮಡಿಲಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಅಮಲಾ ಪೌಲ್ ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರು. ನಟಿ ಗರ್ಭಿಣಿಯಾದ ನಂತರ ಮದುವೆಯಾಗಿದ್ದರು. ಅವರ ಮದುವೆ ಕುಟುಂಬಸ್ಥರು ಹಾಗೂ ಆಪ್ತರ ನಡುವೆ ತುಂಬಾ ಸರಳವಾಗಿ ನಡೆದಿತ್ತು.