ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಡಿಸಿದ್ದ 9 ವರ್ಷದ ಬಾಲಕಿ ಕಿಡ್ಯಾಪ್ ಪ್ರಕರಣದ ಬಾಂಬ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡಿತಿದೆ. 28 ವರ್ಷಗಳ ಹಳೆಯ ಕೇಸ್ ಗೆ ಮಾಜಿ ಪ್ರಧಾನಿ ದೇವೇಗೌಡರು ಜೀವ ತುಂಬ್ತಿದ್ದು ಡಿಕೆಶಿ ವಿರುದ್ಧ ತಿರುಗಿಬಿದ್ದಿದ್ದಾರೆ. ದಾಖಲೆ ಸಮೇತ ಯುದ್ಧಕ್ಕೆ ಇಳಿದಿದ್ದು ಪಂಥಾಹ್ವಾನ ಕೊಟ್ಟಿದ್ದಾರೆ. ಬಾಲಕಿ ಕಿಡ್ಯಾಪ್ ಮಾಡಿ ದೌರ್ಜನ್ಯವೆಸಗಿ ಆಸ್ತಿ ಬರೆಸಿಕೊಂಡ ಪ್ರಕರಣ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗ್ತಿದೆ..
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಯುದ್ಧ ಮುಗಿಯೋತರ ಕಾಣ್ತಿಲ್ಲ. ಒಂದಲ್ಲಾ ಒಂದು ವಿಚಾರವಾಗಿ ವಾಕ್ಫ್ರಹಾರ ನಡೆಸ್ತಿದ್ದ ನಾಯಕರು ಇದೀಗ ಗಂಭೀರ ವಿಚಾರವೊಂದಕ್ಕೆ ಜಿದ್ದಿಗೆ ಬಿದ್ದಿದ್ದಾರೆ. ಕಳೆದ 2 ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಡಿಕೆಶಿ ವಿರುದ್ಧ 28 ವರ್ಷಗಳ ಹಿಂದೆ ನಡೆದ ಪ್ರಕರಣದ ಬಗ್ಗೆ ಗಂಭೀರ ಆರೋಪ ಮಾಡಿದ್ರು. ಬಿಡದಿ ಸಮೀಕ ಭೂಮಿ ಕಬಳಿಸಲು 9 ವರ್ಷದ ಬಾಲಕಿಯನ್ನು ಕಿಡ್ಯಾಪ್ ಮಾಡಿ ದೌರ್ಜನ್ಯವೆಸಗಿ ಅವರ ತಂದೆ- ತಾಯಿಯನ್ನು ಬೆದರಿಸಿ ಜಮೀನು ಬರೆಸಿಕೊಂಡಂತೆ ನಮ್ಮನ್ನು ಹೆದರಿಸಲಾಗಲ್ಲ ಅಂದಿದ್ರು..
1996-97 ರಲ್ಲಿ ನಡೆದ ಘಟನೆ ಅದರ ದಾಖಲೆಗಳಿವೆ, 9 ವರ್ಷದ ಮಗುವನ್ನ ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಿ ಏನು ಮಾಡಿದ್ರಿ. ಬೆಂಗಳೂರು ಮೈಸೂರು ಹೈವೆಯಲ್ಲಿ ಜಮೀನು ಬರೆಸಿಕೊಳ್ಳಲು ಏನು ಮಾಡಿದ್ರಿ, ಚೆಕ್ ಕೊಟ್ಟಿರುವುದು ಬೇಕಾ, ಚೆಕ್ ಡಿಸ್ ಆನರ್ ಮಾಡಿರುವ ದಾಖಲೆ ಇದೆ ಎಲ್ಲ ಇಟ್ಟಿದ್ದೇವೆ. ಕಂತೆ ಗಟ್ಟಲೇ ದಾಖಲೆ ಇಟ್ಟಿದ್ದೇನೆ ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ ಅಂತ ಡಿಕೆಶಿಗೆ ಪಂಥಾಹ್ವಾನ ಕೊಟ್ಟಿದ್ದಾರೆ ಕುಮಾರಸ್ವಾಮಿ…
ಡಿಕೆಶಿ ವಿರುದ್ಧ ಕುಮಾರಸ್ವಾಮಿ ಮಾಡಿದ್ದ ಆರೋಪಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಧ್ವನಿಗೂಡಿಸಿದ್ದಾರೆ. ಅಮೆರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯ ಬಿಡದಿ ಹತ್ರ ರಸ್ತೆ ಪಕ್ಕದಲ್ಲಿ ಒಂದು ಐಟಿಯನ್ನ ಸ್ಥಾಪನೆ ಮಾಡಿದ್ದರು. ಆ ಜಮೀನಿಗೆ ಅದರ ಹಿಂದಿನ ದಿನ ಡಿಕೆಶಿ ಸುಳ್ಳು ಕ್ರಯ ಪತ್ರ ಮಾಡುತ್ತಾರೆ, ದಾಖಲೆ ನನ್ನ ಬಳಿ ಇದೆ ಅಂತ ಹೈಕೋರ್ಟ್, ಸುಪ್ರೀಂಕೋರ್ಟ್ ಗೆ ಹೋದ್ರು ಮುಖಭಂಗ ಆಯ್ತು. ಆಮೇಲೆ ಅವರ 9 ವರ್ಷದ ಮಗಳನ್ನ ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇಡ್ತಾರೆ.
ನಿನ್ನ ಮಗಳು ಬೇಕು ಅಂದ್ರೆ ಸಹಿ ಮಾಡು ಅಂತಾ ಬೆದರಿಸ್ತಾರೆ ಆ ತಾಯಿ ಎಲ್ಲಾ ಬರೆದುಕೊಡು ನನ್ನ ಮಗಳ ಕರೆದುಕೊಂಡು ಬಾರಪ್ಪಾ ಅಂತ ಗಂಡನ ಕಾಲು ಹಿಡಿಯುತ್ತಾಳೆ. ಆಗ ಆ ಮಗುನ ದೂರ ಕೂರಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ, ಆ ಮಗು ಅಪ್ಪ ಅಂತ ಓಡಿ ಬರುತ್ತೆ, ಮತ್ತೆ ಒಳಗೆ ತೆಗೆದುಕೊಂಡು ಹೋಗ್ತಾರೆ. ಚೆಕ್ ಕೊಡ್ತಾರೆ 16, 4 ಲಕ್ಷಕ್ಕೆ ಎರಡೂ ಲ್ಯಾಪ್ಸ್ ಆಗುತ್ತೆ, ಇದನ್ನ ಹೊರಗೆ ಹೇಳುದ್ರೆ ಏನಾಗುತ್ತೆ ಗೊತ್ತಾ ಅಂತ ಕಬ್ಬನ್ ಪಾರ್ಕ್ ನಲ್ಲಿ ಹೆದರಿಸ್ತಾರೆ. ಈ ಬಗ್ಗೆ ನನ್ನ ಬಳಿ ದಾಖಲೆ ಇವೆ ಅಂತ ಡಿಕೆಶಿ ವಿರುದ್ಧ ದೊಡ್ಡಗೌಡ್ರು ಗಂಭೀರ ಆರೋಪ ಮಾಡಿದ್ದಾರೆ…