ಬೆಂಗಳೂರು: ವರ್ಗಾವಣೆ ದಂಧೆಗೆ ಸಂಬಂಧಿಸಿದ ದಾಖಲೆ ಇದೆ ಎನ್ನಲಾಗಿರುವ ಪೆನ್ ಡ್ರೈವ್ ಬಿಡುಗಡೆ ಮಾಡಲು ಸೋಮವಾರ(ಇಂದು) ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೋಮವಾರ ಪೆನ್ ಡ್ರೈವ್ ನಲ್ಲಿರುವ ಆಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇದರ ನಡುವೆ ಈವರೆಗೆ ಒಂದು ಲೆಕ್ಕ ಸೋಮವಾರದಿಂದ ಅಸಲಿ ಲೆಕ್ಕ ಶುರು ಎಂಬಂತಾಗಿದೆ. ಪೆನ್ಡ್ರೈವ್ ಮೂಲಕ ನೆಕ್ಸ್ಟ್ ಪಾಲಿಟಿಕ್ಸ್ ಡ್ರೈವ್ ಶುರುವಾದಂತಿದೆ. 4 ಇಲಾಖೆಗಳ ವರ್ಗಾವಣೆ ವಿಚಾರಗಳ ಬಗ್ಗೆ ಹೆಚ್ಡಿಕೆ ತಲಾಶ್ ಆರಂಭಿಸಿದ್ದಾರೆ. ಹುಡುಕಲು ಹೋದ ಹೆಚ್ಡಿಕೆಗೆ ಸಿಕ್ಕಿದ್ದೇನು..? ಬಿಟ್ಟಿದ್ದೇನು..? ಎಂಬ ಚರ್ಚೆಗಳು ಶುರುವಾಗಿದೆ.
ಸದನದಲ್ಲಿ ಬಿಜೆಪಿ (BJP) ಸಹಕಾರದೊಂದಿಗೆ ಸಿದ್ದರಾಮಯ್ಯ (Siddaramaiah) ಟೀಂ ಟಾರ್ಗೆಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಹೆಚ್ಡಿಕೆ ನಂಬಿಕಸ್ಥ ಅಧಿಕಾರಿಗಳೇ ಪೆನ್ಡ್ರೈವ್ ಅಸಲಿಗೆ ಕಾರಣ ಎಂಬ ಚರ್ಚೆ ಶುರುವಾಗಿದೆ. 4 ಇಲಾಖೆಗಳಲ್ಲಿ ಮೂವರು ಪ್ರಭಾವಿಗಳ ಸಂಭಾಷಣೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಪೆನ್ಡ್ರೈವ್ ಪ್ರಮುಖ ಅಧಿಕಾರಿಗಳ ವಿಚಾರದಲ್ಲಿ ಸಂಭಾಷಣೆ ನಡೆಸಿರುವ ಆಡಿಯೋ ಇದೆ ಎನ್ನಲಾಗಿದೆ.
ಈ ಆಡಿಯೋಗಳನ್ನೇ ಮುಂದಿಟ್ಟುಕೊಂಡು ಹೆಚ್ಡಿಕೆ ಪೆನ್ಡ್ರೈವ್ ಬ್ರಹ್ಮಾಸ್ತ್ರ ಹೂಡಲಿದ್ದಾರೆ. ಬಜೆಟ್ ಬಳಿಕ ಅಸಲಿ ಆಟ ಶುರುವಾಗಲಿದೆ ಅಂತಾ ಆಪ್ತರ ಬಳಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರಂತೆ. ಹಾಗಾಗಿ ಮುಂದಿನವಾರ ರಾಜ್ಯ ರಾಜಕಾರಣದಲ್ಲಿ ರಣರೋಚಕ ಕದನ ಸಾಧ್ಯತೆ ಇದೆ.