ಸಿಂಹ ಕಾಡಿಗೆ ರಾಜ… ಮೊಸಳೆ ನೀರಿಗೆ ರಾಜ… ಮೊಸಳೆಗಳು ಬೇಟೆಯಲ್ಲಿ ಪಳಗಿರುವ ಜೀವಿಗಳು. ನಿಧಾನಕ್ಕೆ ಬಂದು ಗಬ್ಬಕ್ಕನೆ ಬಾಯಿ ಹಾಕಿ ಗುರಿ ಇಟ್ಟ ಪ್ರಾಣಿಯನ್ನು ನೀರಿಗೆ ಎಳೆಯುವುದರಲ್ಲಿ ಈ ಬಲಶಾಲಿ ಜೀವಿಗಳು ಎತ್ತಿದ ಕೈ. ಆದರೆ, ಕೆಲವೊಮ್ಮೆ ಇಂತಹ ಚಾಣಕ್ಯ ಬೇಟೆಗಾರ ಜೀವಿಗಳೂ ತನ್ನ ಪ್ರಯತ್ನದಲ್ಲಿ ಕಡೇ ಕ್ಷಣದಲ್ಲಿ ವಿಫಲವಾಗುವುದು ಕೂಡಾ ಇದೆ. ಇದಕ್ಕೆ ಬೇಕಾದಷ್ಟು ಸಾಕ್ಷಿಗಳು ಸಿಗುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ.
Video Player
00:00
00:49
ಇದು ಜಿಂಕೆಯೊಂದು ಕಡೇ ಕ್ಷಣದಲ್ಲಿ ಜೀವ ಉಳಿಸಿಕೊಂಡ ರೋಚಕ ದೃಶ್ಯ. ನೀರಿನಲ್ಲಿ ಸಾಗುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಈ ಜಿಂಕೆ ನೀರಿನಲ್ಲಿ ಸಾಗುತ್ತಲೇ ಅದ್ಭುತವಾಗಿ ಜೀವ ಉಳಿಸಿಕೊಂಡಿದೆ. ಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯವೇ ರೋಚಕವಾಗಿದೆ.