ಬೆಂಗಳೂರು: ಸಮಾನ ಮನಸ್ಕರ ಒಕ್ಕೂಟದಿಂದ ಮುಖ್ಯಮಂತ್ರಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಗುಂಡು, ತುಂಡು, ಸಿಗರೇಟ್ ಕೈಯಲ್ಲಿದ್ರೆ ಮಾತ್ರ ಬುದ್ಧಿ ಓಡುವ ಜನ. ಇಂತಹ ಬುದ್ಧಿಜೀವಿಗಳು ಮೆಕಾಲೆ ಗರಡಿಯಲ್ಲಿ ಪಳಗಿದವರು.
ಮೆಕಾಲೆ ಸದಾ ಭಾರತವನ್ನು ದಾಸ್ಯದ ಚಿಂತನೆಯಲ್ಲೇ ಯೋಚಿಸ್ತಿದ್ದ. ಮೆಕಾಲೆ ಭಾರತೀಯರ ಸಂಸ್ಕೃತಿಯ ವಿರುದ್ಧ ಇದ್ದವನು. ರಾಜ್ಯ ಇರಬಾರದು ಎನ್ನುವ ಚಿಂತನೆ ಕಾರ್ಲ್ ಮಾರ್ಕ್ಸ್ದಾಗಿತ್ತು. ಮಾರ್ಕ್ಸ್ ಚಿಂತನೆಯ ಜನ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಅಲೆಗ್ಸಾಂಡರ್ ದಿ ಗ್ರೇಟ್, ಅಕ್ಬರ್ ದಿ ಗ್ರೇಟ್ ಅನ್ನೋರು ಇವರು? ದಾಳಿಕೋರರು, ನಮ್ಮ ಸಂಸ್ಕೃತಿ ನಾಶ ಮಾಡಿದವರು ಇವರೆಲ್ಲಾ. ಆರ್ಯಭಟ, ಚಾಣಕ್ಯ, ಅಶೋಕ ಚಕ್ರವರ್ತಿ ಬಗ್ಗೆ ಎಲ್ಲೂ ಹೇಳಿಲ್ಲ. ರಾಜರಾಜಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳ ಅರಸರು, ಇಂಡೋನೇಷ್ಯಾ, ಕಾಂಬೋಡಿಯಾವರೆಗೆ ಭಾರತವನ್ನು ವಿಸ್ತರಿಸಿದ್ದರು.
ಇಂತಹ ಸಾಧನೆಯನ್ನು ನಮಗೆ ಇತಿಹಾಸದಲ್ಲಿ ಹೇಳಿ ಕೊಡಲಿಲ್ಲ. ಅಶೋಕ್ ಚಕ್ರವರ್ತಿ ಸಾಮ್ರಾಜ್ಯ ಪರ್ಷಿಯಾ ದಾಟಿ ಹೋಗಿತ್ತು. ನಾವು ಹೇಳಿಕೊಟ್ಟಿದ್ದು ಅಕ್ಬರ್ ಗ್ರೇಟ್, ಅಲೆಗ್ಸಾಂಡರ್ ಗ್ರೇಟ್, ಬುದ್ಧಿಜೀವಿಗಳು ಮೆಕಾಲೆ, ಮಾರ್ಕ್ಸ್ ಗರಡಿಯಲ್ಲಿ ಪಳಗಿದವರು. ಆ ಜನರಿಗೆ ಭಾರತೀಯತೆ, ದೇಶದ ಹಿರಿಮೆ ಗರಿಮೆ ಹೇಳುವುದಿಲ್ಲ. ಅಂತಹ ಜನರು ಇವತ್ತು ಸಿಎಂ ಕಿವಿಗೆ ಪದೇಪದೆ ಊದುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.