ಇಸ್ಲಾಮಾಬಾದ್: ನಿಧಾನವಾಗಿ ಹೃದಯಾಘಾತವಾಗಲಿ ಎಂದು ನನಗೆ ಚುಚ್ಚು ಮದ್ದನ್ನು ನೀಡಿದ್ದರು. ಜೊತೆಗೆ ವಾಶ್ ರೂಂ ಅನ್ನು ಬಳಸಲು ಅನುಮತಿ ನೀಡಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಇಮ್ರಾನ್ ಖಾನ್ ವಕೀಲರು ಪ್ರತಿಕ್ರಿಯಿಸಿದ್ದು, ಇಮ್ರಾನ್ ಖಾನ್ ಬಿಡುಗಡೆ ನಂತರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದೇವೆ. ಈ ವೇಳೆ ಇಮ್ರಾನ್ ಖಾನ್ ಎದೆ ನೋವಿನ ಬಗ್ಗೆ ತಿಳಿಸಿದ್ದಾರೆ ಎಂದಿದ್ದಾರೆ.
ಇಮ್ರಾನ್ ಖಾನ್ಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಅಷ್ಟೇ ಅಲ್ಲದೇ ನಿಧಾನವಾಗಿ ಹೃದಯಾಘಾತವಾಗಲು ಊಟದಲ್ಲಿ ಇನ್ಸುಲಿನ್ ಅನ್ನು ನೀಡಲಾಗಿದೆ. ಇಮ್ರಾನ್ ಖಾನ್ನನ್ನು ಕೊಲ್ಲುವ ಯತ್ನ ನಡೆಯುತ್ತಿದೆ. ಅವರಿಗೆ ಮಲುಗಲು ಬಿಡುತ್ತಿಲ್ಲ. ಶೌಚಾಲಯ ಹಾಗೂ ಹಾಸಿಗೆ ಇಲ್ಲದ ಕೊಳಕು ಕೊಣೆಯಲ್ಲಿ ಇರಿಸಲಾಗಿತ್ತು. ಅವರಿಗೆ ತಿನ್ನಲು ಏನನ್ನು ನೀಡಿರಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ದ ವೇಳೆ ಜೈಲಿನಲ್ಲಿ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.