ಬೆಂಗಳೂರು:- ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಇಷ್ಟಾದರೂ ಮೌನದಿಂದಲೇ ಇರ್ತೀರಾ ಮೋದಿ ಜೀ? ಎನ್ನುವ ಮೂಲಕ ಪ್ರಧಾನಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರೊಂದಿಗೆ ತೆಗೆಸಿಕೊಂಡ ಫೋಟೋವೊಂದನ್ನು ಎಕ್ಸ್ನಲ್ಲಿ ಹಂಚಿಕೊಳ್ಳುವ ಮೂಲಕ ಮೋದಿ ವಿರುದ್ಧ ಲೇವಡಿ ಮಾಡಿದ್ದಾರೆ.
ಒಬ್ಬ ಹೆಸರಾಂತ ನಾಯಕರ ಜತೆ ನಿಂತಿರುವ ಪ್ರಧಾನಿಗಳು ಅವರ ಹೆಗಲ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲಿರುವ ನಾಯಕನ ಪರ ಚುನಾವಣಾ ಪ್ರಚಾರಕ್ಕಾಗಿ 10 ದಿನಗಳು ಹೋದ ಪ್ರಧಾನಿ, ಆತನನ್ನು ವೇದಿಕೆ ಮೇಲೆ ಮೆಚ್ಚಿ, ಮಾತನಾಡುತ್ತಾರೆ. ಆದರೆ, ಅದೇ ನಾಯಕ ಇಂದು ದೇಶದಿಂದ ಪರಾರಿಯಾಗಿದ್ದಾನೆ. ಇಂತಹ ನೀಚ, ಹೇಯ ಕೃತ್ಯಗಳನ್ನು ಕೇಳಿದಾಗ ಹೃದಯ ಹಿಂಡುತ್ತದೆ. ಆತ ನೂರಾರು ಹೆಣ್ಣುಮಕ್ಕಳ ಜೀವನ ಹಾಳುಮಾಡಿದ್ದಾನೆ. ಇಷ್ಟಾದರೂ ಸಹ ನೀವು ಇನ್ನೂ ಮೌನದಿಂದಲೇ ಇರ್ತೀರಾ ಮೋದಿ ಜೀ?’ ಪ್ರಶ್ನಿಸುವ ಮುಖೇನ ಲೇವಡಿ ಮಾಡಿದ್ದಾರೆ