ದೊಡ್ಡಬಳ್ಳಾಪುರ: ಚುನಾವಣೆಯ ದಿನಾಂಕ ನಿಗದಿಯಾದ ಬೆನ್ನಲ್ಲೆ ತಾಲೂಕಿನಲ್ಲಿ ಪಕ್ಷಾಂತರ ಪರ್ವ ಹೆಚ್ಚಾಗಿದೆ..ಕೊನ್ನಘಟ್ಟ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ವಿಜಯಶಾಲಿಯಾಗಿದ್ದಾ ಅಂಚರಹಳ್ಳಿ ಬಸವರಾಜ್,ಸೊಣ್ಣಪ್ಪನಹಳ್ಳಿ ಗ್ರಾಮದ ಎಪಿಎಂಸಿ ಅದ್ಯಕ್ಷ ನಾಗರಾಜ್ ಮತ್ತು ಮುಖಂಡ ನಾಗರಾಜ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು..ಬಿಜೆಪಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಟ, ಬಿಜೆಪಿ ಟಿಕೆಟ್ ಆಕಾಂಕ್ಷಿ ಧೀರಜ್ ಮುನಿರಾಜು ಮಾಡಿರುವ ಸಮಾಜ ಸೇವೆ,ಸಾಮಾಜಿಕ ಕಾರ್ಯಗಳು ಮತ್ತು ಬಿಜೆಪಿ ತತ್ವ ಸಿದ್ದಾಂತಗಳನ್ನು ಮೆಚ್ಚಿ ಗ್ರಾಮಸ್ಥರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಇದೆ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಕ್ತಾರೆ ಪುಷ್ಪ ಶಿವ ಶಂಕರ್ ,ಕೊನ್ನಘಟ್ಟ ಪಂಚಾಯ್ತಿಯ ಹಿರಿಯ ನಾಯಕ ಆಂಜಿನಪ್ಪ, ರಾಜಘಟ್ಟ ಗ್ರಾಮದ ಮುಖಂಡ ನರಸಿಂಹ ಮೂರ್ತಿ,ಪಂಚಾಯ್ತಿ ಸದಸ್ಯ ಪ್ರಭಾಕರ್ ಸೇರಿದಂತೆ ಪಕ್ಷದ ಪಧಾದಿಕಾರಿಗಳು,ಮುಖಂಡರು, ಯುವಕರು ಭಾಗಿಯಾಗಿದ್ದರು.