ಉತ್ತರ ಪ್ರದೇಶ ;– ಮನೆಯಲ್ಲಿ ಬರೋಬ್ಬರಿ ಹನ್ನೆರಡು ಹಾವುಗಳು ಪತ್ತೆಯಾದ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ದೇವಜಿತ್ಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಅವಧೇಶ್ ಅವರು ಎರಡು ದಿನಗಳ ಹಿಂದೆ ತಮ್ಮ ಮನೆಯ ಆವರಣದಲ್ಲಿ ಎರಡು ಹಾವುಗಳನ್ನು ಕಂಡಿದ್ದಾರೆ ಇದನ್ನು ಹಿಡಿಯಲು ಹೋದ ವೇಳೆ ಅದು ಮನೆಯ ಒಳಗೆ ಇರುವ ಬಿಲದೊಳಗೆ ಸೇರಿಕೊಂಡಿದೆ.
ಇದನ್ನು ಅಲ್ಲಿಂದ ರಕ್ಷಿಸಲು ಮುಂದಾಗಿದ್ದಾರೆ. ಹಾವಿನ ರಕ್ಷಣೆಗಾಗಿ ಬಿಲವನ್ನು ಅಗೆದಾಗ ಅದರ ಒಳಗೆ ಒಂದೊಂದೇ ಹಾವುಗಳು ಹೊರ ಬಂದಿವೆ ಅವಧೇಶ್ ಅವರು ಹಾವುಗಳನ್ನು ರಕ್ಷಣೆ ಮಾಡುವವರು ಆಗಿದ್ದರಿಂದ ಹಾವಿನ ಭಯ ಅವರಲ್ಲಿ ಇರಲಿಲ್ಲ ಹಾಗಾಗಿ ಬಿಲದಿಂದ ಹೊರಬಂದ ಒಂದೊಂದೇ ಹಾವುಗಳನ್ನು ಒಂದು ಬಕೆಟ್ ನಲ್ಲಿ ಸುರಕ್ಷಿತವಾಗಿ ಹಾಕಿ ಇಟ್ಟಿದ್ದಾರೆ ಈ ವೇಳೆ ಹಾವುಗಳನ್ನು ಲೆಕ್ಕ ಹಾಕಿದಾಗ ಬರೋಬ್ಬರಿ ಹನ್ನೆರಡು ಹಾವುಗಳು ಪತ್ತೆಯಾಗಿವೆ.