ಬೆಂಗಳೂರು: ಹೊಸ ವರ್ಷವನ್ನು ಹರ್ಷದಿಂದ ಬರ ಮಾಡಿಕೊಳ್ಳಬೇಕು ಎಂದುಕೊಂಡವರಿಗೆ ಕೊರೋನ ಅಡ್ಡಲಾಗಿ ನಿಂತಿದೆ. ಈಗಾಗಲೇ ಜೆಎನ್.1 ಉಪತಳಿ ಹಾವಳಿ ಇಡುತ್ತಿದ್ದು ಆರೋಗ್ಯ ಇಲಾಖೆ ಕೂಡ ಕೊರೋನಾವನ್ನು ಕಟ್ಟಿಹಾಕಲು ಕಸರತ್ತು ನಡೆಸುತ್ತಿದೆ.
ಕರ್ನಾಟಕದಲ್ಲಿ ಏಕಾಏಕಿಯಾಗಿ ಉಪತಳಿಯ ಹಾವಳಿ ಸ್ಫೋಟವಾಗಿದೆ.ಆದರೆ ಅದೃಷ್ಟ ವಶಾತ್ ಆಸ್ಪತ್ರೆಯ ದಾಖಲಾತಿಯಲ್ಲಿ ಏರಿಕೆಯಾಗದೆ, ಬಹುತೇಕ ಸೋಂಕಿತರು ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿರೋರಿಗೆ ಬಿಬಿಎಂಪಿ ಆರೋಗ್ಯ ಇಲಾಖೆ ಔಷಧದ ಕಿಟ್ ಗಳನ್ನು ಅಗತ್ಯ ಬಿದ್ದಲ್ಲಿ ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ.
ಪ್ಯಾರಸೆಟಮಲ್,ಆಂಟಿಬಯೋಟಿಕ್, ಜಿಂಕ್ ಮಾತ್ರೆ,ಮಾಸ್ಕ್ ಗಳನ್ನು ಒಳಗೊಂಡಿರುವ ಕಿಟ್ ಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಜೊತೆ ಟೆಲಿ ಕನ್ಸಲ್ಟಿಂಗ್ ಮೂಲಕ ನಿರಂತರ ಸಂಪರ್ಕವನ್ನು ಮಾಡಲಾಗುತ್ತಿದೆ. ತುರ್ತು ಔಷಧ ಅಗತ್ಯ ಬಿದ್ದರೆ ವೈದ್ಯರನ್ನು ಮನೆಗೆ ಕಳುಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ ಈಗ ಹೊಸ ವರ್ಷದ ಆಚರಣೆಗೆ ಸದ್ಯ ಯಾವುದೇ ನಿಯಮಾವಳಿ ನೀಡಿಲ್ಲವಾದರೂ ಕೊನೆಕ್ಷಣದಲ್ಲಿ ಯಾವುದೇ ಬದಲಾವಣೆ ಆದರೂ ಆಶ್ಚರ್ಯ ಇಲ್ಲ.