ಮಡಿಕೇರಿ : ಕೊಡಗಿನಲ್ಲಿ ವರುಣಾರ್ಭಟ(Heavy Rain In Kodagu) ತೀವ್ರಗೊಂಡಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೆರಿಯ ಪರಂಬು, ಕಲ್ಲುಮೊಟ್ಟೆ ಗ್ರಾಮಕ್ಕೆ ಜಲದಿಗ್ಬಂಧನ ಹಾಕಿದ್ದು, 70 ಕ್ಕೂ ಅಧಿಕ ಕುಟುಂಬಗಳು ನೆರೆಯಲ್ಲಿ ಸಿಲುಕಿಕೊಂಡಿವೆ.
ಪರಿಸ್ಥಿತಿ ಹೀಗಿದ್ದರೂ ಜಿಲ್ಲಾಡಳಿತವು ದೋಣಿಗಳ ವ್ಯವಸ್ಥೆ ಕಲ್ಪಿಸಿಲ್ಲ. ಕನಿಷ್ಟ ರಕ್ಷಣಾ ಸಿಬ್ಬಂದಿಯನ್ನೂ ನೇಮಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ. ಶಿಥಿಲಾವಸ್ಥೆಯ ತೆಪ್ಪದಲ್ಲೇ ಪ್ರವಾಹ ದಾಟಲು ಗ್ರಾಮಸ್ಥರು ಸಾಹಸ ಮಾಡುತ್ತಿದ್ದಾರೆ. ಸಾಹಸಿ ಯುವಕರು ಫ್ಲಾಸ್ಟಿಕ್ ಬುಟ್ಟಿ, ಮರದ ದೊಣ್ಣೆ ಸಹಾಯದಿಂದ ಗ್ರಾಮಸ್ಥರನ್ನು ಪ್ರವಾಹ ದಾಟಿಸುತ್ತಿದ್ದಾರೆ.