ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದ ಹಿನ್ನೆಲೆ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಯಕ್ಸಂಬಾದ ಮುಲ್ಲಾಂಕಿ ಹಜರತ್ ಮನಸುರ ಅಲಿ ದರ್ಗಾಗೆ ನೀರು ನುಗ್ಗಿದ್ದು ದೂದಗಂಗಾ ನದಿ ನೀರು ನುಗ್ಗಿ ದರ್ಗಾ ಜಲಾವೃತಗೊಂಡಿದೆ.
ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ಬಿಟ್ಟುಬಿಡದೇ ಮಳೆ ಸುರಿಯುತ್ತಿದ್ದು, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಅವಾಂತರ ಸೃಷ್ಠಿ ಆಗಿದೆ. ಈಗಾಗಲೇ ಚಿಕ್ಕೋಡಿ ವ್ಯಾಪ್ತಿಯ ಐದು ಕೆಳಹಂತದ ಸೇತುವೆಗಳು ಜಲಾವೃತವಾಗಿದೆ. ಅಪಾಯಮಟ್ಟ ಮೀರಿ ಕಷ್ಣಾ, ವೇದಗಂಗಾ, ದೂದಗಂಗಾ ಹಾಗೂ ಪಂಚಗಂಗಾ ನದಿಗಳು ಹರಿಯುತ್ತಿದೆ.