ಬೆಂಗಳೂರು: ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮತ್ತೆ ಮಳೆ ಹೆಚ್ಚಾಗಲಿದೆ. ಅದಲ್ಲದೆ ಮುಂದಿನ 7 ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ವರುಣಾರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ.
ಹೌದು ಕೊಟ್ಟಿಗೆಹಾರ, ಗುತ್ತಲ್, ತಿಕ್ಕೋಟ, ದೇವರಹಿಪ್ಪರಗಿ, ಭಾಗಮಂಡಲ, ಸಿದ್ದಾಪುರ, ಕೊಲ್ಲೂರು, ಇಳಕಲ್, ರಾಯಚೂರು, ಕುಷ್ಟಗಿ, ಹಾವೇರಿ, ಸೇಡಂ, ಕೂಡಲಸಂಗಮ, ತ್ಯಾಗರ್ತಿ, ದಾವಣಗೆರೆ, ಕುಂದಾಪುರ, ನಾಪೋಕ್ಲು, ಚಿಟಗುಪ್ಪ, ಸೈದಾಪುರ, ಸವಣೂರು, ಮುನಿರಾಬಾದ್, ಯಲಬುರ್ಗಾ, ನಾರಾಯಣಪುರಲದಲ್ಲಿ ಮಳೆಯಾಗಿದೆ.
ಹಗರಿಬೊಮ್ಮನಹಳ್ಳಿ, ದಾವಣಗೆರೆ, ಗುಬ್ಬಿ, ರಾಮನಗರ, ಮೂಡಿಗೆರೆ, ಸುಳ್ಯ, ಪಣಂಬೂರು, ಕದ್ರಾ, ಕಾರವಾರ, ಕ್ಯಾಸಲ್ರಾಕ್, ಮುದ್ದೇಬಿಹಾಳ, ರೋಣ, ಗದಗ, ಶಿಗ್ಗಾಂವ್, ಬೆಳ್ಳಟ್ಟಿ, ಗಂಗಾವತಿ, ಗೋಕಾಕ್, ಲಕ್ಷ್ಮೇಶ್ವರ, ನಿಪ್ಪಾಣಿ, ಆನವಟ್ಟಿ, ಬಾಳೆಹೊನ್ನೂರು, ಸೋಮವಾರಪೇಟೆ, ಕುಡತಿನಿಯಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದೆ, ಎಚ್ಎಎಲ್ನಲ್ಲಿ 28.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.8ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.