ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಮುಂದಿನ 4 ದಿನಗಳ ಕಾಲ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯ ಆಗ್ನೇಯ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಧಾನವಾಗಿ ಮೋಚಾ ಚಂಡಮಾರುತ ರೂಪುಗೊಳ್ಳುತ್ತಿದೆ. ಮೇ 8ರಂದು ಪ್ರಾರಂಭವಾಗಲಿದ್ದು, ಮೇ 9ರ ನಂತರ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಮೇ 9ರ ವೇಳೆಗೆ ಮೋಚಾ ಚಂಡಮಾರುತ ತೀವ್ರ ರೂಪ (Cyclone Mocha is an extreme form)ಪಡೆಯಲಿದೆ. ಭಾನುವಾರದ ಬಳಿಕಗಾಳಿಯು ಗಂಟೆಗೆ 540-50 ಕಿ.ಮೀ ವೇಗದಲ್ಲಿ ಬೀಸಲಿದೆ.
ಒಡಿಶಾ ಕರಾವಳಿ ಹಾಗೂ ಅಂಡಮಾನ್ (Coastal and Andaman)ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗದಂತೆ ಮೀನುಗಾರರಿಗೆ ಎಚ್ಚರಿಕೆ ರವಾನಿಸಲಾಗಿದೆ. ಮೇ8 ರಿಂದ 12ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೀದರ್, ನಿರ್ಣಾ, ಹುಮನಾಬಾದ್, ನಿಂಬರ್ಗಾ ತಾಂಡಾ, ಕೋಲಾರ, ಕಮಲಾಪುರ, ಹಲಬರ್ಗಾ, ತಿಪಟೂರು, ಮಿಡಿಗೇಶಿ, ಕಾಟಿಕೆರೆ, ಹೊಳೆ ಹೊನ್ನೂರು, ಶ್ರೀರಂಗಪಟ್ಟಣದಲ್ಲಿ ಮಳೆಯಾಗಿದೆ.