ಜಿಲ್ಲೆಯ ಬಹುತೇಕ ಕಡೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ಪೊನ್ನಂಪೇಟೆ ವಿರಾಜಪೇಟೆ ಕುಶಾಲನಗರ ತಾಲೂಕುಗಳಲ್ಲಿನ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಗಳಿಗೆ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆಯನ್ನು ಘೋಷಿಸಿದ್ದಾರೆ.
ಆದರೆ ಅಂಗನವಾಡಿಗಳಿಗೆ ರಜೆಯನ್ನು ಇನ್ನು ಘೋಷಣೆ ಮಾಡಿಲ್ಲ ಜಿಲ್ಲೆಯ ಬಾಲ ವಿಕಾಸ ಯೋಜನಾಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ರಜೆಯನ್ನು ಘೋಷಣೆ ಮಾಡಬೇಕಾಗಿತ್ತು ಆದರೆ ಇನ್ನೂ ಘೋಷಣೆಯಾಗದರಿಂದ ಮಕ್ಕಳ ಪೋಷಕರಲ್ಲಿ ಮತ್ತು ಅಂಗನವಾಡಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ.