ಗದಗ:- ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಜಿಲ್ಲೆಯ ರೇಣುಕಾಸಾಗರ ಜಲಾಶಯ ಭರ್ತಿಗೆ ಕೇವಲ 10 ಅಡಿ ಬಾಕಿ ಹಿನ್ನೆಲೆ ಯಾವುದೇ ಕ್ಷಣದಲ್ಲಾದರೂ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡಬಹುದು. ಹೀಗಾಗಿ ಗದಗ ಜಿಲ್ಲಾಡಳಿತ ಫುಲ್ ಅಲಟ್೯ ಆಗಿದೆ.
ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಜಿಲ್ಲೆಯ ಮಲಪ್ರಭಾ ನದಿ ಪಾತ್ರದ ಹಾಗೂ ಬೆಣ್ಣೆಹಳ್ಳ ಪಾತ್ರದ ಮೆಣಸಗಿ, ಕುರುವಿನಕೊಪ್ಪ, ಅಮರಗೋಳ, ಹೊಳೆ ಹಡಗಲಿ, ಹೊಳೆ ಆಲೂರ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲಾದ್ರೂ ನೀರು ಬಿಡುಗಡೆ ಮಾಡಬಹುದು. ಎಲ್ಲರೂ ಜಾಗೃತರಾಗಿರುವಂತೆ ಸೂಚನೆ ನೀಡಿದ್ದಾರೆ.
ಸ್ಥಳೀಯರಿಂದ ನದಿ ಹಾಗೂ ಹಳ್ಳಗಳ ಹೂಳೆತ್ತಿ, ಹಳ್ಳದಲ್ಲಿ ಬೆಳೆದ ಮುಳ್ಳಿನ ಕಂಟಿಗಳನ್ನ ತೆಗೆಸುವಂತೆ ಮನವಿ ಮಾಡಿದ್ದಾರೆ. ಪ್ರವಾಹ ಭೀತಿ ಎದುರಾದರೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಜಿಲ್ಲಾಧಿಕಾರಿಗೆ ಜಿಲ್ಲಾ ಪಂಚಾಯತ್ ಸಿಇಓ ಭರತ್ ಎಸ್, ಎಸ್ಪಿ ಬಿ ಎಸ್ ನೇಮಗೌಡ ಸಾಥ್ ಕೊಟ್ಟಿದ್ದಾರೆ.
ತಹಶಿಲ್ದಾರ ನಾಗರಾಜ ಕೆ, ಸಿಪಿಐ ಎಸ್ ಎಸ್ ಬೀಳಗಿ ಉಪಸ್ಥಿತರಿದ್ದರು.